ಶಾಲಾ ಮಕ್ಕಳಿಗೆ ಉಚಿತ ಆರ್‌ಟಿಇ ಪ್ರವೇಶ

ಬೆಂಗಳೂರು: ಉಚಿತ ಮತ್ತು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ )ಯಡಿ ಅರ್ಜಿ ಸಲ್ಲಿಸಲು ಏಪ್ರಿಲ್ 8 ರವರೆಗೆ ಅವಕಾಶ ನೀಡಲಾಗಿದೆ. 2021 -22 ನೇ ಸಾಲಿನಲ್ಲಿ ನಿಗದಿತ ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಆರ್.ಟಿ.ಇ. ಮೀಸಲಾತಿ ಸೀಟುಗಳ ಪ್ರವೇಶಕ್ಕೆ ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಇಲಾಖೆ ಆರ್.ಟಿ.ಇ. ಮೀಸಲಾತಿಯಡಿ ಸೀಟು ಗುರುತಿಸಿದ್ದು, ವೆಬ್ಸೈಟ್ನಲ್ಲಿ ಪೆÇೀಷಕರು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದ್ದು, ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.

 

NEWSDESK

TIMES OF BENGALURU