ಸಬ್‍ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರು

ಬೆಂಗಳೂರು : ಬೆಂಗಳೂರು ನಗರ ಕಾತುರದಿಂದ ಕಾಯುತ್ತಿರುವ 148 ಕಿ.ಮೀ ಉದ್ದದ ಸಬ್‍ಅರ್ಬನ್ ರೈಲು ಕಾರಿಡಾರ್‍ಗಳಿಗೆ ಕನ್ನಡದ ಹೂವುಗಳ ಹೆಸರಿಟ್ಟು ವಿಶೇಷವಾಗಿ ನಾಮಕರಣ ಮಾಡಲಾಗುತ್ತಿದೆ.

ನಗರದ ನಾಲ್ಕು ಉಪನಗರ ರೈಲು ಕಾರಿಡಾರ್‍ಗಳಿಗೆ ಸಂಪಿಗೆ, ಮಲ್ಲಿಗೆ, ಪಾರಿಜಾತಾ, ಕನಕ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಕೆ-ರೈಡ್ ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿ ಯೋಜನೆ ರೂಪಿಸಿದೆ. ಮೂಲಗಳು ಪ್ರಕಾರ, ಸಂಪಿಗೆ, ಮಲ್ಲಿಗೆ, ಪಾರಿಜಾತ, ಕನಕ ಈ ಹೂವುಗಳ ಮೊದಲ ಅಕ್ಷರ ಆರಿಸಿಕೊಂಡರೆ ಅದು ಸಂಪರ್ಕ ಎಂದಾಗುತ್ತದೆ ಆದಾ ಕಾರಣ ಹೂವುಗಳ ಹೆಸರನ್ನು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಇಲ್ಲದೇ ಮೆಜೆಸ್ಟಿಕ್ ಬಸ್ ನಿಲ್ದಾಣದೆದುರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವಿದೆ. ಯಲಹಂಕ-ದೇವನಹಳ್ಳಿ ಕಾರಿಡಾರ್‍ಗೆ ಸಂಪಿಗೆ, ಬೈಯಪ್ಪನಹಳ್ಳಿ -ಯಶವಂತಪುರ-ಚಿಕ್ಕಬಾಣಾವರ ಕಾರಿಡಾರ್‍ಗೆ ಮಲ್ಲಿಗೆ, ಕೆಂಗೇರಿ ಕಂಟೋನ್ಮೆಂಟ್ ವೈಟ್‍ಫೀಲ್ಡ್ ಕಾರಿಡಾರ್‍ಗೆ ಪಾರಿಜಾತಾ ಹಾಗೂ ಹೀಳಲಿಗೆ, ಯಲಹಂಕ-ರಾಜಾನುಕುಂಟೆ ಕಾರಿಡಾರ್‍ಗೆ ಕನಕ ಎಂದು ನಾಮಕರಣ ಮಾಡಲಾಗುತ್ತದೆ.

NEWS DESK

TIMES OF BENGALURU