ಸರ್ಕಾರಕ್ಕೆ ಬಜೆಟ್ ಮಂಡಿಸುವ ನೈತಿಕತೆಯೇ ಇಲ್ಲ

ಬೆಂಗಳೂರು : ಈ ಭಾರಿಯ ಬಜೆಟ್ ಮಂಡಿಸಲು ಹಾಗೂ ಅಧಿಕಾರದಲ್ಲಿ ಇರಲು ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು

ಆರು ಸಚಿವರು ಸಂವಿಧಾನದ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿ, ಸಚಿವರಾದವರು. ಈಗ ಭಯ ಇದೆ ಅಂತ ಟೆಂಪ್ರರಿ ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಹೀಗೆ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಏನೂ ತಪ್ಪು ಮಾಡಿಲ್ಲ ಅಂದ್ರೆ ಯಾಕ್ ಇಂಜೆಕ್ಷನ್ ಆರ್ಡರ್ ತಗೊಳ್ಳಬೇಕು ಎಂದು ಪ್ರಶ್ನಿಸಿದರು. ನಾನು ಸಚಿವ ಕೆ.ಗೋಪಾಲಯ್ಯ ಅವರನ್ನು ಕೇಳಿದೆ.. ನೀವ್ ಯಾಕೆ ತಗೊಂಡಿಲ್ಲ ಇಂಜೆಕ್ಷನ್ ಆದೇಶ ಅಂತ.

ನಾನು ಯಾವುದೇ ತಪ್ಪು ಮಾಡಿಲ್ಲ. ಅದಕ್ಕೆ ನಾನು ಕೋರ್ಟ್ ಮೊರೆಯನ್ನು ಹೋಗಿಲ್ಲ ಅಂದ್ರು.. ಹಾಗಾದ್ರೇ.. ಕೋರ್ಟ್ ಮೊರೆ ಹೋದಂತ 6 ಸಚಿವರು ಯಾವುದೋ ತಪ್ಪು ಮಾಡಿರಬೇಕು. ಅದೇ ಭಯದಲ್ಲಿ ಕೋರ್ಟ್ ಗೆ ಹೋಗಿ ತಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಾತ್ಕಾಲಿಕವಾಗಿ ಇಂಜೆಕ್ಷನ್ ಆದೇಶ ಪಡೆದಿದ್ದರಾ ಎಂಬುದಾಗಿ ಕಿಡಿಕಾರಿದರು.

 

NEWSDESK

TIMES OF BENGALURU