ಬೆಂಗಳೂರಿನ ಅಭಿವೃದ್ಧಿಗೆ ನವಚೈತನ್ಯ ಕಾರ್ಯಕ್ರಮ

ಬೆಂಗಳೂರು : ನಗರದ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 7795 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿರುವ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಾರಿಯ ಆಯವ್ಯಯದಲ್ಲಿ ಬೆಂಗಳೂರು ಮಿಷನ್ 2022- ಬೆಂಗಳೂರಿಗೆ ನವಚೈತನ್ಯ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.

ವಿಶ್ವದಲ್ಲೇ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಸುಗಮ ಸಂಚಾರ ವ್ಯವಸ್ಥೆ , ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಹಸಿರು ಹೊದಿಕೆ ಹೆಚ್ಚಳ ಸೇರಿದಂತೆ ನಗರಕ್ಕೆ ನವಚೈತನ್ಯ ನೀಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಲ್ಲೇಶ್ವರದ ಮೈಸೂರು ಲ್ಯಾಂಪ್ಸ್ ಸಂಸ್ಥೆಗೆ ಸೇರಿದ ಪ್ರದೇಶವನ್ನು ಕರ್ನಾಟಕ ಸಂಸ್ಕøತಿಯನ್ನು ಬಿಂಬಿಸುವ ಎಕ್ಸ್‍ಪಿರಿಯನ್ಸ್ ಬೆಂಗಳೂರು ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ನಗರದ ಹೃದಯ ಭಾಗದಲ್ಲಿ ಅತ್ಯವಶ್ಯಕವಾಗಿರುವ ಲಂಗ್ ಸ್ಪೇಸ್ ಸೃಷ್ಟಿಯಾಗುವುದು ಎಂದರು.

 

NEWS DESK

TIMES OF BENGALURU