ಬಿಬಿಎಂಪಿಯಿಂದ ಮಹಿಳಾ ಮಾರ್ಷಲ್‍ಗಳ ನೇಮಕ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಕೋವಿಡ್-19 ನಿಯಮಾವಳಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸದವರಿಗೆ ಬಿಬಿಎಂಪಿ ದಂಡ ವಸೂಲಿ ಮಾಡಲು ಮಹಿಳಾ ಮಾರ್ಷಲ್‍ಗಳನ್ನು ನೇಮಕ ಮಾಡಿದೆ.

ಇದುವರೆಗೆ ಪುರುಷ ಮಾರ್ಷಲ್ ಗಳನ್ನು ಮಾತ್ರ ಬಿಬಿಎಂಪಿ ನೇಮಿಸಿತ್ತು. ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದಾಗ ಕೆಲವೊಮ್ಮೆ ಮಹಿಳೆಯರು ಮಾರ್ಷಲ್ ಗಳ ಜೊತೆ ಜಗಳ ಪರಿಸ್ಥಿತಿ ನಿಭಾಯಿಸಲು ಮಾರ್ಷಲ್ ಗಳು ಹರಸಾಹಸಪಡುತ್ತಿದ್ದರು. ಹಾಗಾಗಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಮಾರ್ಷಲ್ ಗಳ ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

NEWS DESK

TIMES OF BENGALURU