ಬೆಳಂಬೆಳ್ಳಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ವಿರೋಧಿ ದಳದ (ಎಸಿಬಿ) ಪೊಲೀಸರು ರಾಜ್ಯದ 11 ಜಿಲ್ಲೆಗಳ 9 ಅಧಿಕಾರಿಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. 28 ಸ್ಥಳಗಳಲ್ಲಿ ಶೋಧನಾ ಕಾರ್ಯ ಆರಂಭವಾಗಿದೆ.

ಇದಾಗಲೇ ಹಲವಾರು ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಮನೆಯಲ್ಲಿರುವ ಅಕ್ರಮ ಸಂಪಾದನೆ, ಚಿನ್ನಾಭರಣ, ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಯಾದಗಿರಿಯಲ್ಲಿ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ನಿರೀಕ್ಷೆಗೆ ಮೀರಿದ ಹಣ, ಚಿನ್ನವನ್ನು ಪತ್ತೆ ಮಾಡಿದೆ. ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಮ್ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.

ಇನ್ನೊಂದೆಡೆ ಮಂಡ್ಯದ ಆರ್.ಟಿ.ಒ. ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಎ.ವಿ. ಚೆನ್ನವೀರಪ್ಪ ಎಂಬುವವರ ಮನೆ ಮೇಲೆ ಸಹ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯದ ಕುವೆಂಪುನಗರದ ಮನೆ, ತಾಲೂಕಿನ ಅಲಕೆರೆಯಲ್ಲಿನ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.ಈ ವೇಳೆ ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದ್ದು ಎರಡೂ ಕಡೆಗಳಲ್ಲಿ ಪರಿಶೀಲನೆ ಕಾರ್ಯ ಮುಂದುವರಿದಿದೆ. ಮಂಡ್ಯದ ಕುವೆಂಪುನಗರದ ಮನೆ, ತಾಲೂಕಿನ ಅಲಕೆರೆಯಲ್ಲಿನ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.ಈ ವೇಳೆ ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದ್ದು ಎರಡೂ ಕಡೆಗಳಲ್ಲಿ ಪರಿಶೀಲನೆ ಕಾರ್ಯ ಮುಂದುವರಿದಿದೆ.

 

NEWS DESK

TIMES OF BENGALURU