ಫುಟ್‍ಬಾಲ್ ಮೈದಾನದಲ್ಲಿ ಘರ್ಷಣೆ

ಬೆಂಗಳೂರು: ನಗರದ ಬೆಂಗಳೂರು ಫುಟ್‍ಬಾಲ್ ಮೈದಾನದಲ್ಲಿ ಬೆಂಗಳೂರು ಎಫ್‍ಸಿ ಅಧಿಕಾರಿಗಳು ಮತ್ತು ರೆಫರಿಗಳ ನಡುವಿನ ಕಾಳಗಕ್ಕೆ ವೇದಿಕೆಯಾಯಿತು. ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು, ತಂಡದವರು ಗಲಾಟೆಯಲ್ಲಿ ಭಾಗಿಯಾದ ಕಾರಣ ರಾಜ್ಯ ಫುಟ್‍ಬಾಲ್ ಸಂಸ್ಥೆಯ (ಕೆಎಸ್‍ಎಫ್‍ಎ) ಹಾಗೂ ಬೆಂಗಳೂರು ಜಿಲ್ಲಾ ಫುಟ್‍ಬಾಲ್ ಸಂಸ್ಥೆಯ (ಬಿಡಿಎಫ್‍ಎ) ಕಚೇರಿಯ ಕಿಟಕಿ ಗಾಜಿಗೂ ಕಲ್ಲುಗಳು ಬಿದ್ದವು.

ಬಿಡಿಎಫ್‍ಎ ಆಯೋಜಿಸಿರುವ ಸೂಪರ್ ಡಿವಿಷನ್ ಲೀಗ್‍ನ ಪಂದ್ಯದಲ್ಲಿ ಎಫ್‍ಸಿ ಬೆಂಗಳೂರು ಯುನೈಟೆಡ್ ತಂಡ ಬೆಂಗಳೂರು ಎಫ್‍ಸಿಯನ್ನು 3-2ರಲ್ಲಿ ಮಣಿಸಿತ್ತು. ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಏಕಾಏಕಿ ಗಲಾಟೆ ಆರಂಭವಾಯಿತು. ಪಂದ್ಯದಲ್ಲಿ ಮೂರು ಪೆನಾಲ್ಟಿ ಕಿಕ್‍ಗಳನ್ನು ರೆಫರಿ ನಿರಾಕರಿಸಿದರು ಎಂದು ತಂಡದ ಅಧಿಕಾರಿಗಳು ಆರೋಪಿಸಿದ್ದರು. ಡಿಫೆಂಡರ್ ಹರಪ್ರೀತ್ ಸಿಂಗ್‍ಗೆ ರೆಡ್ ಕಾರ್ಡ್ ತೋರಿಸಿದ್ದು ಅವರನ್ನು ಮತ್ತಷ್ಟು ಕುಪಿತಗೊಳಿಸಿತ್ತು. ರೆಫರಿ ಜೊತೆ ವಾಗ್ವಾದ ನಡೆಸಿ ಅವಾಚ್ಯ ಪದಕಗಳಿಂದ ನಿಂದಿಸಿದ್ದಕ್ಕಾಗಿ ರೆಡ್ ಕಾರ್ಡ್ ತೋರಿಸಲಾಗಿತ್ತು ಎಂದು ಟೂರ್ನಿಯ ಅಧಿಕಾರಿಗಳು ತಿಳಿಸಿದರು.

ಪಂದ್ಯದ ನಂತರ ಅಧಿಕಾರಿಗಳು ಮತ್ತು ತಂಡದ ಅಭಿಮಾನಿಗಳು ರೆಫರಿಯ ಕೋಣೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದು ಕಿಟಕಿಯ ಗಾಜಿಗೆ ಇಟ್ಟಿಗೆ ಎಸೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಮನಗಂಡು ಪೊಲೀಸರಿಗೆ ಈ ಬಗ್ಗೆ ವರದಿ ನಿಡಿದ್ದಾರೆ. ಆಧಾರದಲ್ಲಿ ಸಂಬಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‍ಎಫ್‍ಎ ಮತ್ತು ಬಿಡಿಎಫ್‍ಎ ಅಧಿಕಾರಿಗಳು ತಿಳಿಸಿದ್ದಾರೆ.

 

NEWS DESK

TIMES OF BEGALURU