ಈ ಸಿಡಿ 100 ಪರ್ಸೆಂಟ್ ನಕಲಿ

ಬೆಂಗಳೂರು ; ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು, ಸಿಡಿ 100 ಪರ್ಸೆಂಟ್ ನಕಲಿ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಈ ಸಿಡಿಯೇ ನಕಲಿ. ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ಸಿಡಿ ಬಿಡುಗಡೆಗೂ ಮೊದಲು 26 ಗಂಟೆಯಲ್ಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನನಗೆ ಪೆÇೀನ್ ಮಾಡಿ ತಿಳಿಸಿತ್ತು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿ ಹೇಳಿದ್ದಾರೆ. ನಾನು ಬಹಳ ದುಖದಲ್ಲಿದ್ದೇನೆ.

ಸಿಡಿ ಬಿಡುಗಡೆ ಆಗಿದ್ದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆ. ನಾನು ತಪ್ಪು ಮಾಡಿದ್ರೇ.. ಆ ತಾಯಿಯೇ ಶಿಕ್ಷೆ ವಿಧಿಸಲಿ. ಅಲ್ಲಿಂದ ಬಂದು ಒಂದು ದಿನ ತಡೆದು, ರಾತ್ರಿ 9.30ಕ್ಕೆ ಸಿಡಿ ಬಿಡುಗಡೆ ನಂತ್ರ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು. ಯಾರ ಒತ್ತಡದ ಮೇರೆಗೂ ನಾನು ರಾಜಿನಾಮೆ ಕೊಟ್ಟಿಲ್ಲ, ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣದಿಂದ ರಾಜಿನಾಮೆ ನೀಡಿದ್ದೇನೆ, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ನನಗೆ ನನ್ನ ಕುಟುಂಬದ ಮರ್ಯಾದೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇದು ಒಬ್ಬ ಮಹಾನ್ ನಾಯಕನ ಕುತಂತ್ರವಾಗಿದೆ, ನಾಲ್ಕು ಜನ ಸೇರಿ ನಡೆಸಿದ್ದಾರೆ, ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ, ಯಶವಂತಪುರದ ಕಟ್ಟಡ 4 ಮತ್ತು 5ನೇ ಮಹಡಿಯಲ್ಲಿ ನಡೆದ ಷಡ್ಯಂತ್ರ ಇದಾಗಿದೆ. ಇದಕ್ಕಾಗಿ ನೂರಾರು ಕೋಟಿ ರು ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಡಿ ಬಿಡುಗಡೆಯಾದ ನಂತರ ನನ್ನ ಬೆನ್ನಿಗೆ ನಿಂತ ಎಲ್ಲಾ ನಾಯಕರು ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ನನ್ನ ಧನ್ಯವಾದ ಎಂದು ಹೇಳಿದ್ದಾರೆ.  ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ನನಗೆ ನೈತಿಕ ಬೆಂಬಲ ನೀಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಂಚು ರೂಪಿಸಲಾಗಿದೆ. ಈ ವಿಷಯದಲ್ಲಿ ಸೋದರ ಬಾಲಚಂದ್ರ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ರಮೇಶ ಹೇಳಿದರು..

 

NEWS DESK

TIMES OF BENGALURU