ಜಮೀರ್ ಮಾತಿಗೆ ಬಲಿಯಾದರಾ ಭದ್ರಾವತಿ ಎಂಎಲ್ಎ..?

ಬೆಂಗಳೂರು : ಜಮೀರ್ ಗ್ಯಾಕೆ ಬೇಕಿತ್ತು ಈ ಉಸಾಬರಿ.? ಜಮೀರ್ ಮಾತಿಗೆ ಬಲಿಯಾದರಾ ಭದ್ರಾವತಿ ಎಂಎಲ್ಎ..? ಹೌದು.. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌ ಸದನದಲ್ಲಿ ಶರ್ಟ್‌ ಕಳಚಿದ್ದಕ್ಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ಸದಸ್ಯರು ಸಂಗಮೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.‌ ಈ ವೇಳೆ ಮಾಜಿ ಸಚಿವ ಜಮೀರ್‌ ಅಹಮದ್‌ಖಾನ್‌ ಸಲಹೆಯಂತೆ ಶರ್ಟ್‌ ಬಿಚ್ಚಿರುವುದಾಗಿ ಸಂಗಮೇಶ್‌ ದೂರಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಶರ್ಟ್‌ ಕಳಚಿದ ಸಂಗಮೇಶ್‌ ಬಗ್ಗೆ ಹಿರಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದನಕ್ಕೆ ಅದರದ್ದೇ ಆದ ಗೌರವ ಇದೆ. ಸದನದಲ್ಲಿ ಶರ್ಟ್‌ ಬಿಚ್ಚುವ ಅಗತ್ಯವೇನಿತ್ತು. ಭದ್ರಾವತಿಯಲ್ಲಿ ಸಮಸ್ಯೆಯಾಗಿದ್ದರೆ ಸ್ಪೀಕರ್‌ ಅವರಿಗೆ ನೋಟಿಸ್‌ ನೀಡಿ ಮಾತನಾಡಲು ಅವಕಾಶ ಕೇಳಬೇಕು. ಈ ರೀತಿ ಮಾಡಿದರೆ ಪಕ್ಷದ ಮಾನ ಹರಾಜು ಹಾಕಿದಂತಾಗಲ್ಲವೇ ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮ್ಮನೆ ಇರದೆ ಜಮೀರ್ ಮಾಡಿರುವ ಯಡವಟ್ಟಿಗೆ ಈಗ ಸಂಗಮೇಶ ಶಿಕ್ಷೆ ಅನುಭವಿಸುವಂತಾಗಿದೆ.

ಘಟನೆ ನಡೆದ ವೇಳೆ ಮೊದಲ ಸಾಲಿನಲ್ಲೇ ಕುಳಿತಿದ್ದ ಸಂಗಮೇಶ್‌, ಭದ್ರಾವತಿಯಲ್ಲಿ ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡುಲಾಗುತ್ತದೆ. ಎಂದು ಪ್ರಬಲವಾಗಿ ವಿಷಯ ಮಂಡಿಸಲು ತಯಾರಾಗಿದ್ದರು. ಸಂಗಣ್ಣ ಶರ್ಟ್ ನಿಕಾಲೋ ಎಂದು ಶರ್ಟ್‌ ಬಿಚ್ಚಿ ಪ್ರತಿಭಟನೆ ನಡೆಸುವಂತೆ ಜಮೀರ್‌ ಸಲಹೆ ನೀಡಿದರು. ಅವರ ಸಲಹೆಯಂತೆ ಶರ್ಟ್‌ ಕಳಚಿದೆ ಎಂದು ಸಂಗಮೇಶ್ ಸಮಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌, ಜಮೀರ್‌ ಪ್ಯಾಂಟ್‌ ಬಿಚ್ಚಿ ಎಂದು ಹೇಳುತ್ತಾರೆ ನೀವು ಬಿಚ್ಚುತ್ತೀರಾ? ಸದನದ ಸದಸ್ಯರಾಗಿ ನಿಮಗೆ ಸದನ ನೀತಿ ನಿಯಮಗಳು ಗೊತ್ತಿಲ್ಲವೇ? ಎಂದು ತೀವ್ರ ತರಾಟೆಗೆ ತೆಗೆದುಕೊಂಡು ಎಂದು ತಿಳಿದುಬಂದಿದೆ.

 

NEWS DESK

TIMES OF BENGALURU