ಕುಟುಂಬದ 6 ಜನರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಅಲ್ಪ ಸ್ವಲ್ಪ ಕೊರೋನಾ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇಯಿದೆ. ಅದರಲ್ಲೂ ರಾಚೇನಹಳ್ಳಿ ಮುಖ್ಯರಸ್ತೆಯಲ್ಲಿರುವ ನವಗ್ರಹ ಅಪಾರ್ಟ್‍ಮೆಂಟ್‍ನಲ್ಲಿನ ಒಂದೇ ಕುಟುಂಬದ ಆರು ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಇವರ ಸಂಪರ್ಕದಲ್ಲಿರುವಂತ 204 ಜನರಿಗೆ ಆರೋಗ್ಯ ಇಲಾಖೆ ಕೊರೋನಾ ಪರೀಕ್ಷೆ ನಡೆಸುತ್ತಿದೆ.

ನಗರದ ಥಣಿಸಂದ್ರ ಹತ್ತಿರದ ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದಲ್ಲಿನ ರಾಚೇನಹಳ್ಳಿ ಮುಖ್ಯರಸ್ತೆಯಲ್ಲಿರುವಂತ ನವಗ್ರಹ  ಅಪಾರ್ಟ್ ಮೆಂಟ್ ನಲ್ಲಿ ಕೊರೋನಾ ಅಟ್ಟಹಾಸ ಮೆರೆದಿದೆ. ಇಲ್ಲಿ ವಾಸವಿರುವಂತ ಒಂದೇ ಕುಟುಂಬದ 6 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ನವಗ್ರಹ ಅಪಾರ್ಟ್ ಮೆಂಟ್ ನ ಒಂದೇ ಕುಟುಂಬದ 6 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟ ಹಿನ್ನಲೆಯಲ್ಲಿ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದಂತ 54 ಮಂದಿ ಹಾಗೂ 150 ಮಂದಿ ದ್ವಿತೀಯ ಸಂಪರ್ಕಿತರು ಸೇರಿದಂತೆ 204 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಕೊರೋನಾ ಪರೀಕ್ಷೆಯ ವರದಿ ಬರಬೇಕಿದೆ.

 

NEWS DESK

TIMES OF BENGALURU