ಪಾಪ.. ರಮೇಶ್ ಜಾರಕಿಹೊಳಿ ಅಮಾಯಕರು

ಬೆಂಗಳೂರು:  ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ, ಘಟನೆ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಇನ್ನೂ ನೈತಿಕತೆಗೆ ಬೆಂಬಲ ಕೊಟ್ಟು ಆತ್ಮಸ್ಥೈರ್ಯ ತುಂಬಿದ ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣನವರಿಗೆ ಧನ್ಯವಾದಗಳನ್ನು ತಿಳಿಸಿದ್ರು. ಇದರ ಬೆನ್ನಲ್ಲೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿಯವರು ಪಾಪ ರಮೇಶ್ ಜಾರಕಿಹೊಳಿ ಅಮಾಯಕರು ಎಂದು ಸಾಹುಕಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಪಾಪ ರಮೇಶ್ ಜಾರಕಿಹೊಳಿ ಅಮಾಯಕರು. ಬಾಂಬೆಗೆ ಶಾಸಕರನ್ನು ಕರೆದುಕೊಂಡು ಹೋದ್ರು. ಯಾರ್ ಯಾರ್ ಬಗ್ಗೆ ಏನೇನು ಷಡ್ಯಂತ್ರ ಮಾಡಿದ್ದಾರೋ ನನಗೆ ಗೊತ್ತಿಲ್ಲ.ಗಂಡು-ಹೆಣ್ಣಿನ ಸಂಪರ್ಕ, ಸಂಘರ್ಷ ಇಂದಿನದ್ದಲ್ಲ. ರಾಮಾಯಣ, ಮಹಾಭಾರತ ನಡೆದಿದ್ದು ಏಕೆ.? ಆ ಕಾಲದಿಂದಲೂ ಇವೆಲ್ಲಾ ನಡೆಯುತ್ತಲೇ ಇವೆ. ಮನುಷ್ಯ ತಪ್ಪು ಮಾಡೋದು ಸಹಜ. ಆದ್ರೇ ಎಚ್ಚರಿಕೆಯಿಂದ ಇರಬೇಕು ಹೇಳಿದರು.

2 + 3 + 4 ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಬಾಲಚಂದ್ರರನ್ನೇ ಕೇಳಬೇಕು. 2 ಅಂದ್ರೇ ಫ್ಲೈಟ್ ನಲ್ಲಿ ಕರೆದುಕೊಂಡು ಹೋದವರಾ.? 3 ಅಂದ್ರೇ ಬಾಂಬೆಯಲ್ಲಿ ನೋಡಿಕೊಂಡವರಾ.? 4 ಅಂದ್ರೆ ಬಾಂಬೆಯಿಂದ ಕರೆದುಕೊಂಡು ಬಂದವರಾ. ಎಂಬುದಾಗಿ ಹೊಸ ಬಾಂಬ್ ಸಿಡಿಸಿದರು. ಇನ್ನೂ ಮುಂದುವರೆದು ಮಾತನಾಡಿದಂತ ಅವರು 6 ಸಚಿವರು ಕೋರ್ಟ್‍ಗೆ ಹೋಗಿದ್ದಾರೆ. ಇವರಿಗೆ ಈ ಐಡಿಯಾ ಕೊಟ್ಟವರು ಯಾರು.? ಜನ ಇವರ ಬಗ್ಗೆ ಏನಂದುಕೊಳ್ಳಬೇಕು. ಇಂಥದನ್ನು ನೋಡಲು ನನ್ನ ಸರ್ಕಾರ ಬೀಳಿಸಬೇಕಿತ್ತಾ.? ಎಂಬುದಾಗಿ ಪ್ರಶ್ನಿಸಿದರು.

NEWS DESK

TIMES OF BENGALURU