ಸದ್ಯದಲ್ಲೇ ಬಿಬಿಎಂಪಿಯಿಂದ ಬಜೆಟ್ ಮಂಡನೆ

ಬೆಂಗಳೂರು : ಮಾರ್ಚ್ 20ರ ಬಳಿಕ ಬಿಬಿಎಂಪಿ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. 7 ಸಾವಿರ ಕೋಟಿ ರೂ.ಗಳ ಮಿತವ್ಯಯದಲ್ಲಿ ಬಜೆಟ್ ಮಂಡಿಸಲು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಪೂರ್ವಭಾವಿ ಸಭೆಗಳು ಸಹ ನಡೆಸುತ್ತಿದ್ದು, ಬಜೆಟ್‍ನ ಕರಡು ಸಿದ್ಧವಾಗುತ್ತಿದೆ.

ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ವಲಯವಾರು ಅಧಿಕಾರಿಗಳ ಸಭೆ ನಡೆಸಿ ಬಜೆಟ್‍ನ ಸಿದ್ದತೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಜನಪ್ರತಿನಿಗಳ ಆಡಳಿತದಲ್ಲಿದ್ದ ಅವ್ಯಯ ಬಿಬಿಎಂಪಿಯಲ್ಲಿ 11,995 ಕೋಟಿ ರೂ.ಗಳ ಬೃಹತ್ ಗಾತ್ರದ ಬಜೆಟ್ ಮಂಡನೆಯಾಗಿತ್ತು. ಸರ್ಕಾರ 11,715 ಕೋಟಿ ರೂ.ಗಳಿಗೆ ಇಳಿಸಿ ಅನುಮೋದನೆ ಮಾಡಿತ್ತು. ಆದರೆ, ಈ ಬಾರಿ ಮಿತವ್ಯಯದ ಬಜೆಟ್ ಮಂಡನೆ ಮಾಡಬೇಕು. ಯಾವುದೇ ಹೊಸ ಕಾಮಗಾರಿಗಳಿಲ್ಲ.

ಹಳೆಯ ಕಾಮಗಾರಿಗಳ ಮುಂದುವರಿಕೆಗೆ ಆದ್ಯತೆ ನೀಡುವುದು ಮತ್ತು ಸಾಲದ ಹೊರೆಯನ್ನು ಇಳಿಸುವ ಉದ್ದೇಶ ಹೊಂದಲಾಗಿದೆ.ಮೂಲಭೂತ ಸೌಕರ್ಯಗಳಿಗೆ ಆದ್ಯತೆ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಪಾರ್ಕಿಂಗ್‍ಗಳ ಅಭಿವೃದ್ಧಿ, ಶೌಚಾಲಯಗಳು, ಸ್ಮಾರ್ಟ್ ಪಾಕಿರ್ಂಗ್ ವ್ಯವಸ್ಥೆ, ತೆರಿಗೆ ಸಂಗ್ರಹ, ಸಂಪನ್ಮೂಲ ಕ್ರೂಢೀಕರಣಕ್ಕೆ ಹೆಚ್ಚು ಒತ್ತು ನೀಡುವ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ 7ಸಾವಿರ ಕೋಟಿ ರೂ.ಗಳ ಮಿತಿಗೊಳಪಟ್ಟ ಬಜೆಟ್ ಮಂಡನೆಯಾಗಲಿದೆ.

 

NEWS DESK

TIMES OF BENGALURU