ಡ್ರಗ್ ಕೇಸ್ ; ನಿರ್ಮಾಪಕ ಶಂಕರಗೌಡ ವಿಚಾರಣೆ

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಕಲಾವಿದರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಂತೆಯೇ ಚಿತ್ರ ನಿರ್ಮಾಪಕರಾದ ಶಂಕರಗೌಡ ಅವರನ್ನು ಡ್ರಗ್ಸ್ ಜಾಲ ಸಂಬಂಧ ಬಾಣಸವಾಡಿ ಉಪವಿಭಾಗದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ ಸದಾಶಿವನಗರದಲ್ಲಿರುವ ಅವರ ಕಚೇರಿ ಮೇಲೆ ದಾಳಿ ಮಾಡಿದ್ದ ಬಾಣಸವಾಡಿ ಉಪವಿಭಾಗದ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಿದ್ದರು.

ಇತ್ತೀಚೆಗೆ ನಾಗವಾರ ಸಮೀಪ ಬಂತರಾದ ಆಫ್ರಿಕಾ ಮೂಲದ ಪೆಡ್ಲರ್‍ಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಮಸ್ತಾನ್‍ಚಂದ್ರ ಅವರನ್ನು ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ವೇಳೆ ಮಸ್ತಾನ್‍ಚಂದ್ರ ಅವರು ನೀಡಿದ ಮಾಹಿತಿ ಮೇರೆಗೆ ನಿರ್ಮಾಪಕ ಶಂಕರಗೌಡ ಅವರ ಕಚೇರಿ ಮೇಲೆ ದಾಳಿ ಮಾಡಿ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.

 

NEWS DESK

TIMES OF BENGALURU