ಬೆಂಗಳೂರು: ಭಾರತದಲ್ಲಿ ಮಾರ್ಚ್ 1ರಿಂದ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿತ್ತು. ಇದೀಗ ಬೆಂಗಳೂರಿನ 103 ವರ್ಷ ವಯಸ್ಸಿನ ಜೆ ಕಾಮೇಶ್ವರಿ ಕೋವಿಡ್ ಲಸಿಕೆ ಪಡೆದ ಅತೀ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ.
ಅಪೊಲೋ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ನಂತರ ಕಾಮೇಶ್ವರಿಯವರ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ ಎಂದು ವರದಿಯಾಗಿದೆ. ಲಸಿಕೆ ಪಡೆಯುವಾಗ ಕಾಮೇಶ್ವರಿಯವರ 77 ವರ್ಷದ ಪುತ್ರ ಕೂಡ ಜೊತೆಗಿದ್ದರು.
NEWSDESK
TIMES OF BENGALURU