ನೀವು ರಾಮನನ್ನು ಗುತ್ತಿಗೆ ಪಡೆದಿಲ್ಲ

ವಿಧಾನಸಭೆಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಚರ್ಚೆಗಿಂತ  ಜೈಶ್ರೀರಾಮ್ ಘೋಷಣೆ ಜೋರಾಗಿಯೇ ನಡೆದಿತ್ತು. ಆದರೆ ಅಚ್ಚರಿ ಎಂದರೇ ರಾಮನಾಮ ಜಪ ಮಾಡುತ್ತಿದ್ದವರು ಬಿಜೆಪಿಯವರಲ್ಲ, ಬದಲಿಗೆ ಕಾಂಗ್ರೆಸ್ ಶಾಸಕರು.

ಇಂಧನ ಬೆಲೆ ಏರಿಕೆ ಬಗ್ಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಉಲ್ಲೇಖಿಸಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕರ ಘೋಷಣೆಯಿಂದಾ ಕಿರಿಕಿರಿಗೊಂಡ ಬಸವರಾಜ ಬೊಮ್ಮಾಯಿ, ಈಗಲಾದರೂ ಕಾಂಗ್ರೆಸ್ಸಿನವರು ರಾಮ ನಾಮ ಜಪ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು. ಈ ವೇಳೆ ಗಲಾಟೆ ಎಬ್ಬಿಸಿದ ಕಾಂಗ್ರೆಸ್ ಶಾಸಕರು ರಾಮ ಮಂದಿರ ಕೇವಲ ಬಿಜೆಪಿಯ ಆಸ್ತಿಯಲ್ಲ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ನೀವು ರಾಮನನ್ನು ಗುತ್ತಿಗೆ ಪಡೆದಿಲ್ಲ, ನಾನು ಕೂಡ ರಾಮಭಕ್ತ. ನನ್ನ ಹೆಸರಲ್ಲೇ ರಾಮ ಇದಾನೆ ಎಂದು ಬಿಜೆಪಿಗೆ ಸಿದ್ದು ತಿರುಗೇಟು ನೀಡಿದ್ರು. ಸಿದ್ದರಾಮಯ್ಯಗೆ ಪ್ರಶ್ನಿಸಿದ ಸ್ಪೀಕರ್ ಕಾಗೇರಿ, ನೀವು ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿದ್ದೀರಾ ? ಎಂದು ಕಿಚಾಯಿಸಲು ಮುಂದಾದರು. ಅದಕ್ಕೆ ನಮ್ಮೂರಿನ ರಾಮನ ಗುಡಿಗೆ ಹಣವನ್ನ ಕೊಟ್ಟಿದ್ದೇನೆ . ಆದರೆ , ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿಲ್ಲ . ಎಲ್ಲಿ ಕೊಟ್ಟರೇನು ರಾಮನಿಗೆ ಕೊಟ್ಟೆ ಎಂದು ಸಿದ್ದರಾಮಯ್ಯ ಸ್ಪೀಕರ್ ಕಾಗೇರಿಗೆ ಕಾಂಗ್ರೆಸ್ ನಾಯಕರ ಘೋಷಣೆಯಿಂದ ಕಿರಿಕಿರಿಗೊಂಡ ಬಸವರಾಜ ಬೊಮ್ಮಾಯಿ, ಈಗಲಾದರೂ ಕಾಂಗ್ರೆಸ್ಸಿನವರು ರಾಮ ನಾಮ ಜಪ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

 

NEWS DESK

TIMES OF BENGALURU