ಸಿಡಿ ಪ್ರಕರಣದ ತನಿಖೆಗೆ ಘೋಷಣೆ

ಬೆಂಗಳೂರು : ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿರುವ ಸಿಡಿ ಪ್ರಕರಣವನ್ನು ಗೃಹ ಇಲಾಖೆಯಿಂದ ತನಿಖೆ ಮಾಡಲು ಘೋಷಣೆ ಮಾಡಲಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಯಲು ಪ್ರಕರಣವನ್ನು ಗೃಹ ಇಲಾಖೆಯಿಂದ ತನಿಖೆಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಿಡಿ ಪ್ರಕರಣದ ತನಿಖೆ ಮಾಡುವಂತೆ ನಿನ್ನೆ ಬಂದು ಮನವಿ ಮಾಡಲಾಗಿದ್ದು, ತನಿಖೆಯ ಬಗ್ಗೆ ಗೃಹ ಸಚಿವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

 

NEWS DESK

TIMES OF BENGALURU