ಗುಜರಿ ಸೇರಿದ 22 ಲಕ್ಷ ವಾಹನಗಳು

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿಯಮದಿಂದಾಗಿ ಬೆಂಗಳೂರು ಮಹಾನಗರದಲ್ಲಿ ಬರೋಬ್ಬರಿ 22 ಲಕ್ಷ ವಾಹನಗಳು ಗುಜರಿ ಸೇರಲಿವೆ. 21,96,963 ವಾಹನಗಳು 15 ವರ್ಷ ಮೇಲ್ಪಟ್ಟ ವಾಹನಗಳಿದ್ದು, ಇವುಗಳನ್ನು ಗುಜರಿಗೆ ಹಾಕಿ ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿದೆ.

ದ್ವಿಚಕ್ರವಾಹನ, ಕಾರು, ಸರಕು ಸಾಗಣೆ ವಾಹನಗಳಿಗೆ 10 -15 ವರ್ಷವಾಗುತ್ತಿದ್ದಂತೆ ಇಂಜಿನ್ ಸಾಮಥ್ರ್ಯ ಕುಸಿಯುತ್ತದೆ. ಇದರಿಂದ ವಾಹನಗಳ ಹೊಗೆಯುಗುಳುವ ಪ್ರಮಾಣ ಹೆಚ್ಚಾಗುತ್ತದೆ. ಭಾರೀ ಗಾತ್ರದ ವಾಹನಗಳಿಂದ ಹೊಗೆ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ 15 ವರ್ಷ ಮೇಲ್ಪಟ್ಟ ವಾಹನಗಳ ಬಳಕೆಗೆ ಬ್ರೇಕ್ ಹಾಕಲಾಗಿದೆ. ಬೆಂಗಳೂರಿನಲ್ಲಿ ಸುಮಾರು 22 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟಿದ್ದು, ಅದೇ ರೀತಿ 20 ವರ್ಷ ಮೇಲ್ಪಟ್ಟ ಸುಮಾರು 38 ಲಕ್ಷ ವಾಹನಗಳು ರಾಜ್ಯದಲ್ಲಿವೆ ಎನ್ನಲಾಗಿದ್ದು, ಇವುಗಳನ್ನು ಗುಜರಿಗೆ ಹಾಕಿ ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಲಾಗಿದೆ.

NEWS DESK

TIMES  OF BENGALURU