ಪ್ರೀತಿಸಿ ವಿವಾಹವಾದ ಪತಿಯಿಂದ ವಂಚನೆ

ಬೆಂಗಳೂರು: ಪ್ರೀತಿಸಿ ವಿವಾಹವಾದ ಪತಿಯಿಂದ ವಂಚನೆ ಆರೋಪ ಕೇಳಿ ಬಂದಿದೆ. ಈ ಕಾನ್ಸ್ಟೇಬಲ್ ಪ್ರಮೋದ್ ತನ್ನ ಪತ್ನಿಯನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ಮುಂದೆ ನೊಂದ ಮಹಿಳೆ ತನ್ನ ಪತಿಯನ್ನು ಹುಡುಕಿಕೊಡುವಂತೆ ಕಣ್ಣೀರು ಹಾಕಿದ್ದಾಳೆ.

ಪತಿಯನ್ನು ಹುಡುಕಿಕೊಡುವಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ಎದುರು ಯುವತಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ. ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರ ಗ್ರಾಮದ ಯುವತಿ ಅನುಜಾ ಅದೇ ಗ್ರಾಮದ ಸಿಆರ್ಪಿಎಫ್ ಪೇದೆ ಪ್ರಮೋದ್ ಇಬ್ಬರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಆದರೆ ಇಬ್ಬರ ಪ್ರೀತಿಗೆ ಪ್ರಮೋದ್ ಪಾಲಕರಿಂದ ಒಪ್ಪಿಗೆ ಇರಲಿಲ್ಲವಂತೆ. ಆದಾಗ್ಯು ಇದೇ ಫೆಬ್ರವರಿ 19 ರಂದು ಅನುಜಾ ಜತೆ ಯಲಹಂಕದ ಸಿಆರ್‍ಪಿಎಫ್ ಕ್ಯಾಂಪಸ್ನಲ್ಲೇ ಪ್ರಮೋದ್ ತಾಳಿಕಟ್ಟಿ ಮದುವೆಯಾಗಿದ್ದಾನೆ.

ಮದುವೆಯಾದ ಮಾರನೇ ದಿನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಪ್ರಮೋದ್ ತಂದೆ ಮತ್ತು ಸಹೋದರ ಆತನನ್ನು ಕರೆದೊಯ್ದಿದರು. ಆದರೆ, ಇದುವರೆಗೂ ಪತ್ತೆಯಾಗಿಲ್ಲ. ಫೋನ್ ಮಾಡಿದ್ರೆ  ಪ್ರಮೋದ್ ಪಾಲಕರು ರಿಸೀವ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಾರೆಂದು ಅನುಜಾ ದೂರಿದ್ದಾರೆ. ಇದರಿಂದ ನೊಂದಿರುವ ಅನುಜಾ ಬುಧವಾರ ರಾತ್ರಿ ನಂದಗುಡಿ ಪೊಲೀಸ್ ಠಾಣೆ ಮುಂದೆ ಪೋಷಕರ ಜತೆಗೂಡಿ ಪ್ರತಿಭಟನೆ ನಡೆಸಿದ್ದಾಳೆ. ಜತೆಗೆ ಮತ್ತೊಬ್ಬಳ ಜತೆ ವಿವಾಹಕ್ಕೆ ಸಿದ್ಧತೆ ಆರೋಪ ಮಾಡಿರುವ ಯುವತಿ, ಇದರಲ್ಲಿ ನನ್ನ ಗಂಡನದ್ದು ಯಾವುದೇ ತಪ್ಪಿಲ್ಲ. ಎಲ್ಲ ಅವರ ಪಾಲಕರದ್ದೇ ಕೈವಾಡ. ನನಗೆ ನ್ಯಾಯ ಕೊಡಿಸಿ ಎಂದು ಠಾಣೆ ಧರಣಿ ಕುಳಿತಿದ್ದಾಳೆ.

 

NEWS DESK

TIMES OF BENGALURU