ಲಯಕಾರ ಶಿವನ ಮಹಾಶಿವರಾತ್ರಿ

ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಬರುವಂತಹ ಈ ಶಿವರಾತ್ರಿಯನ್ನು, ಕೋಟಿ ಕೋಟಿ ಜನರು ಇಂದು ಕೈಲಾಸ ವಾಸಿ ಪರಶಿವನನ್ನು ಪೂಜಿಸಿ ಭಜಿಸಿಸುತ್ತಾರೆ. ದೇವರ ದೇವ ಮಹಾದೇವನಿಗೆ ಒಂದು ದಳ ಬಿಲ್ವ ಪತ್ರೆ ಅರ್ಪಿಸಿ ಪೂಜಿಸಿದ್ರೆ ಪರವಶನಾಗುತ್ತಾನೆ ಈ ಪರಮೇಶ್ವರ. ತನ್ನನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದಯಾಮಯಿ ಶಿವನಿಗೆ ಶಿವರಾತ್ರಿಯಂದು ಉಪವಾಸ, ಜಾಗರಣೆಗಳನ್ನು ಮಾಡಿ ಶಿವನನ್ನು ಆರಾಧಿಸಿ, ಭಜಿಸಿದರೆ, ಪಾಪ ಕರ್ಮಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ.

ಎಲ್ಲಾ ಜೀವರಾಶಿಗಳನ್ನು ಸಲಹುವ ಭೋಲೆನಾಥ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಆಡಂಬರದ ಪೂಜೆಯನ್ನು ಕೇಳಲ್ಲ. ಭಕ್ತಿಯಿಂದ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಿಂದ ಪೂಜಿಸಿದ್ರೆ ಸಾಕು, ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಗೊಳಿಸಿ ಜನ್ಮ ಜನ್ಮದ ಪಾಪವನ್ನು ಕಳೆಯುತ್ತಾನೆ ಈ ಕರುಣಾಕರ. ಹಾಲಹಲವನ್ನು ಸೇವಿಸಿ ಜಗತ್ತನ್ನು ಮೃತ್ಯುವಿನಿಂದ ಕಾಪಾಡಿದ ಶಂಕರ ಸದಾ ಕೆಂಡದಂತಿರುತ್ತಾನೆ. ಪರಶಿವನನ್ನು ಶಾಂತಗೊಳಿಸಲು ಸದಾ ನೆತ್ತಿಯ ಮೇಲೆ ಹನಿ ಹನಿಯಾಗಿ ಜಲ ಬೀಳುತ್ತಿರುತ್ತದೆ. ಬ್ರಹ್ಮ ವಿಷ್ಣುಗಳು ಕೈಲಾಸದಲ್ಲಿ ಶಂಕರನನ್ನು ಪೂಜಿಸಿ, ಆ ಶಂಕರನನ್ನು ಸಂಯುಷ್ಟಿಗೊಳಿಸಿದ ಆ ದಿನವನ್ನು ಮಹಾ ಶಿವರಾತ್ರಿಯೆಂದು ಆಚರಿಸಲಾಗುತ್ತಿದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

vಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಭಸ್ಮ ಪ್ರಿಯ ಪರಮೇಶ್ವರನಿಗೆ ಭಸ್ಮವಿಲ್ಲದೇ ಅವನ ಪೂಜೆ ಅಪೂರ್ಣ. ರಾಕ್ಷಸರನ್ನು ಸಂಹಾರ ಮಾಡಿದ ಭೊಲೇನಾಥನಿಗೆ ಭಸ್ಮವೇ ಭೂಷಣ. ಶಿವನ ರುದ್ರ ಮಂತ್ರಕ್ಕೆ ಸಕಾರತ್ಮಕ ಶಕ್ತಿ ಹೆಚ್ಚಿಸುವ ಗುಣವಿದೆ. ಬಿಲ್ವ ಪತ್ರೆಯ ನೀರನ್ನು ನಾವು ತೀರ್ಥದ ರೂಪದಲ್ಲಿ ಸೇವಿಸುವುದರಿಂದ ವೈಜ್ಞಾನಿಕವಾಗಿ ಬಿಲ್ವ ಪತ್ರೆಯು ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಶಿವರಾತ್ರಿಯೊಂದು ಕೊರೋನಾ ಮಹಾಮಾರಿಯನ್ನು ಎದುರಿಸುವ ಶಕ್ತಿ ದಯ ಪಾಲಿಸಿ, ಸಕಲ ಜೀವರಾಶಿಗಳನ್ನು ಸಲಹು ಎಂದು ಬೇಡೋಣ.

NEWS DESK
TIMES OF BENGALURU