ಉಚಿತವಾಗಿ ಕೊರೊನಾ ಲಸಿಕೆ ಪಡೆಯಿರಿ

ಬೆಂಗಳೂರು : ಮೊದಲನೆ ಡೋಸ್ ಅಥವಾ ಎರಡನೆ ಡೋಸ್ ಯಾವುದೇ ಆಗಿದ್ದರೂ ಸರ್ಕಾರಿ ಕೇಂದ್ರಗಳಲ್ಲಿ ಕೊರೊನಾ ಲಸಿಕೆಯನ್ನು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಯಾವುದೇ ಅರ್ಹ ಫಲಾನುಭವಿಗಳು, ಉಚಿತವಾಗಿ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮೊದಲನೆ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಎರಡನೆ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗಿತ್ತು. ಈಗ ಮೂರನೇಹಂತದಲ್ಲಿ ಬಿಟ್ಟುಹೋದ ಆರೋಗ್ಯ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಕೇಂದ್ರಗಳಲ್ಲಿ ನಿಗದಿತ ಬೆಲೆಗೆ ನೀಡಲಾಗುತ್ತಿದೆ ಎಂದು ಸುಧಾಕರ್ ಟ್ವಿಟ್ಟರ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

NEWS DESK

TIMES OF BENGALURU