ರಾಜ್ಯಕ್ಕೆ ಪ್ರತ್ಯೇಕ ಹಣಕಾಸು ಸಚಿವರು ಬೇಕು

ಬೆಂಗಳೂರು : ವಿಧಾನಪರಿಷತ್  ಚರ್ಚೆಯ ವೇಳೆ, ಹಣಕಾಸು ಖಾತೆಗೆ ಹೊರಗಿನ ಸಚಿವರುಗಳು ಬೇಕು. ಸಿಎಂ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಹಲವು ಬಜೆಟ್ ಗಳನ್ನು ಮಂಡಿಸಿದ್ದಾರೆ. ತಾವು ಹಣಕಾಸು ತಜ್ಞರಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು. ಅವರು ಮಂಡಿಸಿರುವ ಬಜೆಟ್ ನಲ್ಲಿ ಆಳವಾದ ಸಮಗ್ರತೆಯಿಲ್ಲ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ

ಹಣಕಾಸು ಖಾತೆಗೆ ಹೊರಗಿನ ಅನುಭವ, ಜ್ಞಾನ ಇರುವ ಸಚಿವರುಗಳು ಬೇಕು. ಅವರು ಹಣಕಾಸಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಅಧ್ಯಯನ ಮಾಡುತ್ತಿರಬೇಕು. ಹಾಗಾದರೆ ಮಾತ್ರ ಹಣಕಾಸಿನ ಶಿಸ್ತು ಬರುತ್ತದೆ ಎಂದರು. ಇದೇ ವಿಷಯಕ್ಕೆ ತಮ್ಮ ಮತ್ತು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ಜಗಳವೇರ್ಪಟ್ಟಿತ್ತು. ರಾಜ್ಯಕ್ಕೆ ಪ್ರತ್ಯೇಕ ಹಣಕಾಸು ಸಚಿವರು ಬೇಕು ಎಂದು ನಾನು ಹೇಳಿದ್ದೆ.

ಅದಕ್ಕವರು ನಿಮಗೆ ನನ್ನ ಸಾಮಥ್ರ್ಯದ ಮೇಲೆ ಅಪನಂಬಿಕೆಯಿದೆಯೇ ಎಂದು ಕೇಳಿದ್ದರು. ಅದು ಸಾಮಥ್ರ್ಯದ ಪ್ರಶ್ನೆ ಅಲ್ಲ, ಸಮಯದ ಅಡತಡೆಯಿಂದ ಸಿಎಂಗಳು ಬೇರೆ ಕೆಲಸಗಳಲ್ಲಿ ಒತ್ತಡ, ಬ್ಯುಸಿಯಲ್ಲಿರುವುದರಿಂದ ಹಣಕಾಸು ಖಾತೆಗೆ ಸಮಯ ಹೊಂದಿಸಲು, ಸರಿಯಾಗಿ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ನಾನು ಹೇಳಿದ್ದೆ ಎಂದು ವಿಶ್ವನಾಥ್ ಹೇಳಿದರು.