ಬೆಂಗಳೂರು : ಶಿವರಾಜ್ ಕುಮಾರ್ ಅವರ 125 ಸಿನಿಮಾ ಅನೌನ್ಸ್ ಆಗಿದೆ. ವೇದ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಭಜರಂಗಿ ಸಿನಿಮಾದ ನಂತರ ಎ ಹರ್ಷ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.
ಇಂದು ರಿಲೀಸ್ ಆಗಿರುವ ವೇದ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಖದ ಮೇಲೆ ಬಿಳಿ ಗಡ್ಡ ಹೊತ್ತು ಕಾಣಿಸಿಕೊಂಡಿರುವ ಶಿವಣ್ಣನ ಖದರ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ವೇದನ ಲುಕ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಕಥೆ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲವಾದರೂ, ಇದು 1960 ರ ಬ್ಯಾಕ್ಡ್ರಾಪ್ ಕಥೆ ಹೊಂದಿದೆ ಎನ್ನುವುದು ಸಿನಿಮಾ ಫಸ್ಟ್ ಲುಕ್ನಲ್ಲಿ ಚಿತ್ರತಂಡ ಸುಳಿವು ನೀಡಿದೆ.
NEWS DESK
TIMES OF BENGALURU