ಏಪ್ರಿಲ್‍ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ

ಬೆಂಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿರುವ ಮಧು ಬಂಗಾರಪ್ಪ, ಇಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ನನ್ನ ಭಾವನೆಗಳಿಗೆ ಬೆಲೆ ಇರಲಿಲ್ಲ. ನನ್ನ ಭಾವನೆಗೆ ಕಾಂಗ್ರೆಸ್ ಸೂಕ್ತ ವೇದಿಕೆಯಾಗಿದ್ದು, ಏಪ್ರಿಲ್ ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಕುಮಾರಸ್ವಾಮಿಯವರ ಮೇಲೆ ನನಗೆ ಅಪಾರ ಗೌರವವಿದೆ. ಜೆಡಿಎಸ್ ನಲ್ಲಿ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ.

ಜೆಡಿಎಸ್ ನಲ್ಲಿ ನಾನು ಯಾವುದೇ ಅಧಿಕಾರವನ್ನೂ ಅನುಭವಿಸಿಲ್ಲ ಎಂದರು. ನಾನು ಎಲ್ಲಿಯೇ ಇದ್ದರೂ ದೇವೇಗೌಡರು, ಕುಮಾರಸ್ವಾಮಿಯವರನ್ನು ಗೌರವಿಸುತ್ತೇನೆ. ಅವರು ರಾಜಕೀಯದಲ್ಲಿ ಹಿರಿಯರು. ಮಧು ಬಂಗಾರಪ್ಪ ವೈಯಕ್ತಿಕವಾಗಿ ಬದಲಾಗಲ್ಲ, ಪಕ್ಷ ಬದಲಾಯಿಸುತ್ತಿದ್ದಾರೆ. ಹೊಸ ಪಕ್ಷ ಹೊಸ ಅವಕಾಶ ಸಿಕ್ಕಿದೆ ಎಂದು ಹೇಳಿದರು.

NEWS DESK

TIMES OF BENGALURU