ಸಿಲಿಕಾನ್‍ಸಿಟಿಯಲ್ಲಿ ನೈಟ್ ಪಾರ್ಟಿಗೆ ಬ್ರೇಕ್

ಬೆಂಗಳೂರು :  ಬೆಂಗಳೂರಿನಲ್ಲಿ, ಕೊರೋನಾ 2ನೇ ಅಲೆಯ ಭೀತಿ ಶುರುವಾಗಿದೆ. ಇದರಿಂದಾಗಿ ಕೊರೋನಾ ಕಂಟ್ರೋಲ್‍ಗಾಗಿ ಕಠಿಣ ಕ್ರಮ ಕೈಗೊಂಡಿರುವಂತ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಮಾರ್ಚ್ 31ರವರೆಗೆ ನೈಟ್ ಪಾರ್ಟಿ ಬ್ಯಾನ್ ಮಾಡಿದೆ.

ರಾಜ್ಯದಲ್ಲಿ ಈಗ ಮಹಾರಾಷ್ಟ್ರ ಕೊರೋನಾ ವೈರಸ್ ಭೀತಿ ಉಂಟಾಗಿದೆ. ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಕೊರೊನಾ ಕಂಟ್ರೋಲ್ ಗೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ 31ರವರೆಗೆ ಬೆಂಗಳೂರಿನಲ್ಲಿ ಈ ಟಫ್ ರೂಲ್ಸ್ ಜಾರಿಗೊಳಿಸಿರುವಂತ ಸರ್ಕಾರ, ಲೇಟ್ ನೈಟ್ ಪಾರ್ಟಿಗಳಿಗೆ ಬ್ರೇಕ್ ಹಾಕಿದೆ. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ ನಡೆಸಲಾಗುತ್ತಿದ್ದಂತ ಲೇಟ್ ನೈಟ್ ಪಾರ್ಟಿಗಳಿಗೆ ನಿಷೇಧ ಹೇರಿದ್ದು, ಈ ಮೂಲಕ ಕೊರೋನಾ ಕಂಟ್ರೋಲ್‍ಗೆ ಮುಂದಾಗಿದೆ.

NEWS DESK

TIMES OF BENGALURU