ಸಿಡಿ ಪ್ರಕರಣ ; ಓರ್ವ ಎಸ್‍ಐಟಿ ವಶಕ್ಕೆ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ನಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಎಸ್ ಐ ಟಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಎಸ್‍ಐಸಿ ವಶಕ್ಕೆ ಪಡೆದಿರುವ ಈ ವ್ಯಕ್ತಿ ದಿನೇಶ್ ಕಲ್ಲಹಳ್ಳಿಗೆ ಸಿಡಿ ತಂದು ಕೊಟ್ಟಿದ್ದ ಎಂದು ಹೇಳಲಾಗ್ತಿದ್ದು, ಆತ ಎಲ್ಲಿ? ಯಾವಾಗ? ಸಿಡಿಯನ್ನ ದಿನೇಶ್ ಕಲ್ಲಹಳ್ಳಿಗೆ ನೀಡಿದ ಮತ್ತು ಆತನ ಕೈಗೆ ಆ ಸಿಡಿ ಸಿಕ್ಕಿದ್ದು ಹೇಗೆ? ಯಾರು ನೀಡಿದ್ರು ಅನ್ನೋ ಹಲವು ವಿಚಾರಗಳ ಬಗ್ಗೆ ತನಿಖೆ ಮುಂದುವರೆದಿದೆ.

NEWS DESK
TIMES OF BENGALURU