ಅಕ್ಕನ ಚಿನ್ನಾಭರಣ ಕದ್ದು ಕಂಬಿ ಎಣಿಸುತ್ತಿರುವ ತಂಗಿ

ಬೆಂಗಳೂರು : ಲಗ್ಗೆರೆಯಚೌಡೇಶ್ವರಿನಗರದಲ್ಲಿ ವಾಸವಿರುವ ಮೀನಾ ಅವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತನಾಡಲು ಬರುವುದಿಲ್ಲ. ಮೀನಾ ಅವರ ತಂಗಿ ಶಶಿಕಲಾ ಅವರು ಇವರ ಮನೆಯ ಮೊದಲನೆ ಮಹಡಿಯಲ್ಲಿ ವಾಸವಾಗಿರುತ್ತಾರೆ. ಮಾ.3ರಂದು ಮೀನಾ ಅವರು, ಅಜ್ಜಿ ಮನೆಗೆ ಹೋಗುವ ಸಲುವಾಗಿ ಒಡವೆ ಹಾಕಿಕೊಳ್ಳಲು ಬೀರು ತೆಗೆದು ನೋಡಿದಾಗ ಬೀರುವಿನಲ್ಲಿದ 220 ಗ್ರಾಂ ತೂಕದ ಆಭರಣಗಳು ನಾಪತ್ತೆಯಾಗಿತ್ತು. ಬಳಿಕ ನಂದಿನಿಲೇಔಟ್ ಪೊಲೀಸರಿಗೆ ದೂರು ನೀಡಿ, ತನ್ನ ಚಿಕ್ಕಮ್ಮ ಶಶಿಕಲಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆಗೊಂಡ ಪೊಲೀಸರು, ಶಶಿಕಲಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾನೇ ಆಭರಣ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಕ್ಕ ಮೀನಾ ಅವರು ರಾತ್ರಿ ವೇಳೆ ಮಲಗುವಾಗ ಬೀರು ಕೀಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಿದ್ದರು. ಅದನ್ನು ಗಮನಿಸಿ ಅಕ್ಕ ಒಬ್ಬರೇ ಇದ್ದಾಗ ಅವರಿಗೆ ಗೊತ್ತಾಗದ ರೀತಿ ಕೀ ತೆಗೆದುಕೊಂಡು ಬೀರುವಿನಲ್ಲಿದ್ದ ಆಭರಣಗಳನ್ನು ಕಳವು ಮಾಡಿ ನಂತರ ಕೀಯನ್ನು ದಿಂಬಿನ ಕೆಳಗೆ ಹಾಗೆಯೇ ಇಟ್ಟಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ. ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

NEWS DESK
TIMES OF BENGALURU