ರಗಡ್ ಲುಕ್‍ನಲ್ಲಿ ಪವರ್ ಸ್ಟಾರ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಸಿನಿಮಾದ 5ನೇ ಸಾಂಗ್ ಇಂದು ಬೆಳಗ್ಗೆ ರಿಲೀಸ್ ಆಗಿದೆ.

ಫೀಲ್ ದಿ ಪವರ್ ಎಂಬ ಲಿರಿಕ್‍ನಿಂದ ಪ್ರಾರಂಭವಾಗುವ ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್(10 ಲಕ್ಷ)ಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದ್ದು, ಯೂಟ್ಯೂಬ್‍ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ಅಪ್ಪು ದಾಡಿ ಬಿಟ್ಟು, ಕೈನಲ್ಲಿ ಗನ್ ಹಿಡಿದು, ರಗಡ್ ಲುಕ್‍ನಲ್ಲಿ ಮಸ್ತ್ ಸ್ಟೆಪ್ ಹಾಕಿದ್ದಾರೆ. ಶಂಕರ್ ಶೇಷಗಿರಿ ಈ ಹಾಡಿಗೆ ಕಂಠದಾನ ಮಾಡಿದ್ದು, ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದಾರೆ. ಪುನೀತ್‍ಗೆ ಜಾನಿ ನೃತ್ಯ ನಿರ್ದೇಶನ ಮಾಡಿದ್ದು, ಎಸ್ ತಮನ್ ಸಂಗೀತಾ ಸಂಯೋಜಿಸಿದ್ದಾರೆ. ಪ್ರೇಕ್ಷಕರಿಂದ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

NEWS DESK

TIMES OF BEGALURU