ಹೋಟೆಲ್ ಮಾಲೀಕರಿಗೆ ಖಡಕ್ ಸೂಚನೆ

ಬೆಂಗಳೂರು : ಹೋಟೆಲ್‌ ಅಡುಗೆ ಭಟ್ಟರು, ಊಟ ಬಡಿಸುವವರು ಕೈಗವಸು ಹಾಕೋದು ಕಡ್ಡಾಯ.ಮಾಸ್ಕ್‌ ಧರಿಸದ ಗ್ರಾಹಕರಿಗೆ ಹೋಟೆಲ್‌ನೊಳಗೆ ಪ್ರವೇಶಿಸಲು ಅನುಮತಿ ನೀಡಬಾರದು. ಹೋಟೆಲ್‌ಗಳ ಮಾಲೀಕರಿಗೆ ಬಿಬಿಎಂಪಿ ಆಯುಕ್ತರಿಂದ ಖಡಕ್ ಸೂಚನೆ. ಹೌದು ಕೊರೋನಾ ಮಿತಿ ಮೀರಿ ಬೆಳೆಯುತ್ತಿರುವದರಿಂದ ಹೊಟೇಲ್ ಮಾಲೀಕರಿಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ಹೋಟೆಲ್‌ಗಳಲ್ಲಿನ ಅಡುಗೆ ಭಟ್ಟರು, ಊಟ ಬಡಿಸುವವರು ಕಡ್ಡಾಯವಾಗಿ ಕೈಗವಸು ಧರಿಸಬೇಕು. ಮಾಸ್ಕ್‌ ಧರಿಸದ ಗ್ರಾಹಕರಿಗೆ ಹೋಟೆಲ್‌ನೊಳಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಬಿಬಿಎಂಪಿ ಆಯುಕ್ತ ಎನ್‌ ಮಂಜುನಾಥ ಪ್ರಸಾದ್‌ ಅವರು ಹೋಟೆಲ್‌ಗಳ ಮಾಲೀಕರಿಗೆ ಸೂಚನೆ ನೀಡಿದರು.

ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ 6 ಅಡಿಯಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗ್ರಾಹಕರು ಊಟ ಅಥವಾ ಕಾಫಿ ಸೇವಿಸುವ ವೇಳೆಯಲ್ಲಿ ಮಾತ್ರ ಮಾಸ್ಕ್‌ ತೆಗೆಯುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕ್ಯಾ‌ನ್‌ ಮಾಡಬೇಕು. ಹೋಟೆಲ್‌ನ ಪ್ರವೇಶ ದ್ವಾರದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ನಗರದ ರಸ್ತೆ ಬದಿಗಳಲ್ಲಿನ ಹೋಟೆಲ್‌ಗಳ ಮೇಲೆ ಮಾರ್ಷಲ್‌ಗಳು ನಿಗಾ ವಹಿಸಲಿದ್ದಾರೆ. ಕೋವಿಡ್‌ ನಿಯಮಗಳನ್ನು ಪಾಲಿಸದವರಿಗೆ ನಿಯಮಾನುಸಾರ ದಂಡ ಹಾಕಲಾಗುವುದು ಎಂದು ಕಮೀಷನರ್ ವಾರ್ನ್ ಮಾಡಿದ್ದಾರೆ.

NEWS DESK

TIMES OF BENGALURU