ಸಿಡಿ ಗ್ಯಾಂಗ್ ಬೆನ್ನತ್ತಿದ ಎಸ್ ಐಟಿ ತಂಡ

ಬೆಂಗಳೂರು : ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣವನ್ನು ಈಗಾಗಲೇ ಎಸ್‍ಐಟಿ ತನಿಖಾ ತಂಡಕ್ಕೆವಹಿಸಿದೆ. ಸಿಡಿ ಗ್ಯಾಂಗ್ ಬೆನ್ನು ಬಿದ್ದಿರುವಂತ ಎಸ್ ಐಟಿ ತಂಡವು ತನಿಖೆ ಚುರುಕುಗೊಳಿಸಿ, ವೀಡಿಯೋ ಅಪ್ ಲೋಡ್ ಮಾಡಿದವರ ಮನೆಯ ಮೇಲೆ ರೈಡ್ ಮಾಡಿದ್ದು, ಮಹತ್ವದ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಇಂದು ಎಸ್ ಐ ಟಿ ಪೊಲೀಸರು ಸಿಡಿ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ. ಸಿಡಿ ಗ್ಯಾಂಗ್ ಹಿಂದೆ ಬಿದ್ದಿರುವ ಎಸ್ ಐಟಿ ತಂಡ, ದೇವನಹಳ್ಳಿ ಸಮೀಪದ ವಿಜಯಪುರದಲ್ಲಿರುವ ಸಿಡಿ ಗ್ಯಾಂಗ್ ಮನೆಯಲ್ಲಿ ಹುಡುಕಾಟ ನಡೆಸುತ್ತಿದೆ. ಮನೆಯಲ್ಲಿದ್ದಂತ ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದೆ. ಈ ಮೂಲಕ ತನಿಖೆಯನ್ನು ಚುರುಕುಗೊಳಿಸಿದೆ.

NEWS DESK

TIMES OF BENGALURU