ರೌಡಿಶೀಟರ್ ರಾಜುದೊರೈ ಪೊಲೀಸರ ವಶಕ್ಕೆ

ಬೆಂಗಳೂರು : ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿದ್ದ ರಾಜುದೊರೈ ವಿರುದ್ಧ ಕೊಲೆಯತ್ನ ಸೇರಿದಂತೆ ಹಲವು ಅಪರಾಧಗಳು ದಾಖಲಾಗಿದ್ದವು. ಬೈಯ್ಯಪ್ಪನಹಳ್ಳಿ ರೌಡಿ ಶೀಟರ್ ರಾಜುದೊರೈನನ್ನು ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ.

ಬೈಯಪ್ಪನಹಳ್ಳಿಯ ಬೈರಪ್ಪ ಗಾರ್ಡನ್ ನಿವಾಸಿ ರಾಜಾದೊರೆಗೆ ಇನ್ನೂ 25 ವರ್ಷ. ಆಗಲೇ ಹದಿನೇಳು ಕ್ರಿಮಿನಲ್ ಕೃತ್ಯಗಳನ್ನು ಎಸಗಿದ್ದಾನೆ. ಆರು ಕೊಲೆಯತ್ನ ಪ್ರಕರಣ, ಡಕಾಯಿತು, ದೊಂಬಿ, ಸಾರ್ವಜನಿಕ ಸೇವೆಗೆ ಅಡ್ಡಿ ಪಡಿಸುವುದು, ಎಸ್‍ಸಿಎಸ್‍ಟಿ ಸಮುದಾಯದ ಜನಾಂಗಕ್ಕೆ ನಿಂದನೆ ಮಾಡುವ ಹಲವಾರು ಅಪರಾಧ ಕೃತ್ಯ ಎಸಗುತ್ತಿದ್ದ. ಈತನ ವಿರುದ್ಧ ರೌಡಿ ಖಾತೆ ತೆರೆದು ಬೈಯಪ್ಪನಹಳ್ಳೀ ಪೊಲೀಸರು ಬಂಧಿಸದ್ದರು.

ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿ ಮತ್ತೆ ಅದೇ ಕೃತ್ಯಗಳನ್ನು ಮುಂದುವರೆಸಿ ಸಮಾಜದ ಶಾಂತಿಗೆ ಧಕ್ಕೆ ತರುತ್ತಿದ್ದ. ಇದೀಗ ಈತನ ವಿರುದ್ಧ ಗೂಂಡಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಇಷ್ಟಾಗಿಯೂ ಈತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಈತನ ಕೃತ್ಯಗಳನ್ನು ಸಾಮಾನ್ಯ ಕಾನೂನಿನಲ್ಲಿ ಹತ್ತಿಕ್ಕಲು ಆಗದ ಕಾರಣ ಗೂಂಡಾ ಕಾಯ್ದೆ ಅಡಿ ಕೇಸು ದಾಖಲಿಸಿ ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

 

NEWS DESK

TIMES OF BENGALURU