ಸಿಡಿ ಕೇಸ್ : ರಮೇಶ್ ಜಾರಕಿಹೊಳಿ ಆಪ್ತನಿಂದ ದೂರು

ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ದಿನದಿಮದ ದಿನಕ್ಕೆ ಬಿಗ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಂತೆಯೇ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ಆಪ್ತ ಎಂ.ವಿ ನಾಗರಾಜ್ ಬ್ಲ್ಯಾಕ್ ಮೇಲ್ ಕೇಸ್ ದಾಖಲಿಸಲಿದ್ದಾರೆ. ಸ್ವತಃ ರಮೇಶ್ ಜಾರಕಿಹೊಳೆಯವ್ರೇ ಲಿಖಿತ ರೂಪದಲ್ಲಿ ಈ ದೂರನ್ನ ನೀಡಿದ್ದು, ಆಪ್ತ ಎಂ.ವಿ ನಾಗಾರಾಜ್ ಅವ್ರ ಕೈಯಲ್ಲಿ ಠಾಣೆಗೆ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿದೆ.

ಲಿಖಿತ ರೂಪದಲ್ಲಿರುವ ಈ ದೂರಿನಲ್ಲಿ ರಮೇಶ್ ಅವ್ರ ಸಹಿ ಇದ್ದು, ಈ ಸಿಡಿಯಿಂದ ತನ್ನ ತೇಜೋವಧೆ ಆಗಿದೆ, ಸೂಕ್ತವಾಗಿ ತನಿಖೆ ಮಾಡಿ ಎಂದಿದೆ. ಇನ್ನು ದೂರಿನಲ್ಲಿ ನನ್ನನ್ನ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಬರೆಯಲಾಗಿದ್ದು, ಯಾರ ಹೆಸ್ರನ್ನು ಉಲ್ಲೇಖ ಮಾಡಿಲ್ಲ ಅಂಥ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಆದ್ರೆ, ದೂರುದಾರನಿಲ್ಲದೇ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗ್ತಿದ್ದು, ಸದ್ಯ ಪೊಲೀಸರು ಕಾನೂನು ತಜ್ಞರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಕೇಸ್ ದಾಖಲಿಸಿಕೊಂಡು ಎಫ್‍ಐಆರ್ ದಾಖಲು ಮಾಡಿಕೊಳ್ಳಬಹುದು ಎನ್ನಲಾಗಿದೆ.

NEWS DESK

TIMES OF BENGALURU