ಲಾಲ್‌ಬಾಗ್‌ನಲ್ಲಿ ಅಣಬೆ ಪ್ರದರ್ಶನ

ಬೆಂಗಳೂರು: ಮೊದಲ ಬಾರಿಗೆ ಐಐಎಚ್‌ಆರ್ ವತಿಯಿಂದ ಲಾಲ್‌ಬಾಗ್‌ನಲ್ಲಿ ಮಾ.೨೦ರಂದು ಅಣಬೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ‘ಮಶ್ರೂಮ್ ಓಪನ್ ಡೇ’ ಯನ್ನು ಏರ್ಪಡಿಸಲಾಗಿದೆ. ತೋಟಗಾರಿಕೆ ಇಲಾಖೆ ಮತ್ತು ಹುಳಿಮಾವು ಬಯೋಟೆಕ್ನಾಲಜಿ ಕೇಂದ್ರಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ವೇಳೆ ಅಣಬೆ ಬೀಜ, ರೆಡಿ ಟು ಫ್ರೂಟ್ ಬ್ಯಾಗ್ (ಅಣಬೆ ಬೆಳೆಯಲು ಸಿದ್ಧವಾದ ಬ್ಯಾಗ್‌ಗಳು), ಅಣಬೆಯಿಂದ ತಯಾರಿಸಿದ  ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವೂ ಇರುತ್ತದೆ. ಅಣಬೆ ತಿನ್ನಲು ಯಾವುದು ಯೋಗ್ಯ, ಕೆಟ್ಟ ಅಣಬೆ ಯಾವುದು, ಮನೆಯಲ್ಲಿ ಬೇಕೆಂದಾಗ ಹೇಗೆ ಬೆಳೆದುಕೊಳ್ಳಬಹುದು,  ಎಂಬ ಇತ್ಯಾದಿಗಳ ಬಗ್ಗೆ ಮಾಹಿತಿ ಓಪನ್‌ಡೇನಲ್ಲಿ ಸಿಗಲಿದೆ. ಬಗೆ ಬಗೆಯ ಅಣಬೆಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಸಾರ್ವಜನಿಕರು ಯಾರು ಬೇಕಾದರು ಭಾಗವಹಿಸಬಹುದು. ಎಂದು ಐಐಎಚ್‌ಆರ್‌ನ ಅಣಬೆ ವಿಭಾಗದ ಚಂದ್ರಶೇಖರ್ ಮಾಹಿತಿ ನೀಡಿದರು.

 

NEWS DESK

TIMES OF BENGALURU