ಬೆಂಗಳೂರು: ಆಭರಣ ಮಳಿಗೆಗಳಿಗೆ ಹೋಗಿ ಕಳವು ಮಾಡುತ್ತಿದ್ದ ಆರೋಪಿ ವಿ. ಸಂತೋಷ್ಕುಮಾರ್ (23) ಎಂಬುವರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಕೆಂಪಾಪುರ ಅಗ್ರಹಾರ ನಿವಾಸಿ ಸಂತೋಷ್, ಫೈನಾನ್ಸ್ ಸರ್ವೀಸ್ ಹಾಗೂ ಇನ್ವೆಸ್ಟ್ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಂದ 4.76 ಲಕ್ಷ ಹಣ, 92 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಮಳಿಗೆಗಳಲ್ಲಿ ಚಿನ್ನಾಭರಣ ಕದಿಯುವುದು ಹೇಗೆ ಎಂಬುದನ್ನು ಆರೋಪಿ ಯೂಟ್ಯೂಬ್ನಲ್ಲಿ ವಿಡಿಯೊ ನೋಡಿಕೊಂಡು ಕಲಿತಿದ್ದರು.
ಹೀಗೆ ಮಲ್ಲೇಶ್ವರದ ಸಂಪಿಗೆ ರಸ್ತೆಯ ಮಳಿಗೆಯೊಂದರಲ್ಲಿ ಇತ್ತೀಚೆಗೆ ಆರೋಪಿ ಕಳ್ಳತನ ಮಾಡಿದ್ದ. ಈ ಬಗ್ಗೆ ಮಳಿಗೆ ವ್ಯವಸ್ಥಾಪಕ ದೂರು ನೀಡಿದರು. ಷೇರು ಮಾರುಕಟ್ಟೆಯಲ್ಲಿ ಹಣ ಮಾಡಿದ್ದ ಆರೋಪಿ, ನಷ್ಟ ಅನುಭವಿಸಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಮಳಿಗೆಗಳಲ್ಲಿ ಚಿನ್ನಾಭರಣ ಕದಿಯಲಾರಂಭಿಸಿದ್ದರು. ಅದರ ಮಾರಾಟದಿಂದ ಬಂದ ಹಣವನ್ನು ಮನೆ ನಿರ್ವಹಣೆಗೆ ಖರ್ಚು ಮಾಡುತ್ತಿದ್ದರು ಎಂದು ಆರೋಪಿಯೇ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
NEWS DESK
TIMES OF BENGALURU