ಸೋಂಕು ಹೆಚ್ಚಾದರೆ ಲಾಕ್‍ಡೌನ್ ಅನಿವಾರ್ಯ

ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರದಿಂದ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು, ನಿತ್ಯ 500 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಇದೀಗ ಒಂದು ಸಾವಿರ ಆಸುಪಾಸಿನಲ್ಲಿ ಹೊಸ ಪ್ರಕರಣಗಳು ಪತೆಯಾಗುತ್ತಿದೆ. ಇದರಿಂದ ಮತ್ತೆ ರಾತ್ರಿ ಕಫ್ರ್ಯೂ, ಲಾಕ್‍ಡೌನ್ ಜಾರಿ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಜನರು ನಿಯಮ ಪಾಲಿಸದೆ ಸೋಂಕು ಹೆಚ್ಚಾ ದರೆ ಲಾಕ್‍ಡೌನ್ ಅನಿವಾರ್ಯ ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಹಿಂದಿನ ಕಠಿಣ ದಿನಗಳು ಮತ್ತೆ ಬರಬಾರದು ಎಂದಿದ್ದಲ್ಲಿ ಸೋಂಕು ಹತೋಟಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಫೆಬ್ರವರಿ ಕೊನೆಯ ವಾರದ ವರೆಗೆ ನಿತ್ಯ ಸರಾಸರಿ 400ರಷ್ಟು ಇದ್ದ ಸೋಂಕು ಪ್ರಕರಣಗಳು ಮಾರ್ಚ್ ಮೊದಲ ವಾರ 530ಕ್ಕೆ ಮುಟ್ಟಿದ್ದವು. ಮಾರ್ಚ್ ಎರಡನೇ ವಾರ 730ಕ್ಕೆ ಏರಿವೆ. ಜನವರಿ ಬಳಿಕ ಇದೇ ಮೊದಲ ಬಾರಿಗೆ ಪ್ರಕರಣಗಳು ಒಂದು ಸಾವಿರದ ಆಸುಪಾಸಿನಲ್ಲಿ ವರದಿಯಾಗುತ್ತಿವೆ. 50 ದಿನಗಳ ಬಳಿಕ ಅತೀ ಹೆಚ್ಚು 934 ಪ್ರಕರಣಗಳು ದಾಖಲಾಗಿವೆ. ದಿನದ ದುಡಿಮೆಯನ್ನು ನಂಬಿರುವ ಕಾರ್ಮಿಕ ವರ್ಗವು ಮತ್ತೆ ಸಂಕಷ್ಟದ ದಿನಗಳನ್ನು ಎದುರಿಸುವ ಆತಂಕದಲ್ಲಿದೆ.

NEWS DESK

TIMES OF BENGALURU