ಮಾರ್ಷಲ್‍ಗಳಿಗೆ ಹೆಚ್ಚಿನ ಅಧಿಕಾರ

ಬೆಂಗಳೂರು :  ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 630 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 410811ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,853ಕ್ಕೆ ಏರಿಕೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್‍ಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ.

ನಿಯಮ ಮೀರಿ ಜನ ಸೇರಿದ್ದರೆ ದಂಡ ವಿಧಿಸುವ, ದಂಡ ವಿಧಿಸುವ ಮಾರ್ಷಲ್‍ಗಳ ಜೊತೆ ಅನುಚಿತವಾಗಿ ವರ್ತಿಸುವವರಿಗೂ ದಂಡ ಹಾಕಲು ಅನುಮತಿ ನೀಡಿದೆ. ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಹಲವಾರು ಜನರು ಮಾಸ್ಕ್ ಧರಿಸದೇ ಓಡಾಟವನ್ನು ನಡೆಸುತ್ತಿದ್ದಾರೆ. ಮದುವೆ, ಚಿತ್ರಮಂದಿರ, ಧಾರ್ಮಿಕ ಕಾರ್ಯಕ್ರಮ, ಸಮಾವೇಶಗಳಲ್ಲಿ ಹೆಚ್ಚಿನ ಜನರು ಸೇರಿದ್ದರೆ ದಂಡ ವಿಧಿಸುವ ಅಧಿಕಾರವನ್ನು ಮಾರ್ಷಲ್‍ಗಳಿಗೆ ನೀಡಲಾಗಿದೆ. ಮಾರ್ಷಲ್‍ಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಸಹ ದಂಡ ಕಟ್ಟಬೇಕಾಗುತ್ತದೆ.

 

NEWS DESK

TIMES OF BENGALURU