ಸಿಡಿ ಪ್ರಕರಣ ; ಆರೋಪಿಗಳಿಗೆ ಇ ಮೇಲ್ ನೋಟಿಸ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಸೇರಿ ಮೂವರಿಗೆ ಇ ಮೇಲ್ ಮೂಲಕ ನೋಟಿಸ್ ನೀಡಲಾಗಿದೆ. ಕೇವಲ ವಿಚಾರಣೆಗೆ ಸೀಮಿತವಾಗಿದ್ದ ಎಸ್‌ಐಟಿ ಇದೀಗ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಬೇಕಿದ್ದ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸಿಸಿಬಿ ಡಿವೈಎಸ್ಪಿ ಧರ್ಮೇಂದ್ರ, ಸದಾಶಿವ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಎಸ್‌ಐಟಿ ಮೂಲಗಳು ಹೇಳುವ ಪ್ರಕಾರ ಸಂತ್ರಸ್ತ ಯುವತಿ ವಿಜಯಪುರದ ಮನೆಯ ಮೇಲೆ ನೋಟಿಸ್ ಅಂಟಿಸಿದ್ದು,  ಇಂದು ವಿಚಾರಣೆಗೆ ಬರಲು ಸೂಚಿಸಲಾಗಿದೆ.

ಇಲ್ಲವೇ ಇ ಮೇಲ್ ಮೂಲಕ ಭೇಟಿ ಮಾಡಲಿರುವ ಸ್ಥಳದ ಬಗ್ಗೆ ವಿವರ ನೀಡಿದರು, ಅಲ್ಲಿಗೆ ಬಂದು ಹೇಳಿಕೆ ದಾಖಲಿಸಿಕೊಂಡು ಸೂಕ್ತ ಭದ್ರತೆ ಕೊಡುವುದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೋಟಿಸ್ ಅಂಟಿಸಿದ್ದಾರೆ. ಇನ್ನೊಂದೆಡೆ ಸಿಡಿ ಸ್ಫೋಟ ಪ್ರಕರಣ ಸಂಬಂಧ ಯುವತಿ ಸೇರಿ ಇಬ್ಬರು ಶಂಕಿತ ಪ್ರಮುಖ ಆರೋಪಿಗಳಿಗೂ ಇ ಮೇಲ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ನೋಟಿಸ್‌ಗೆ ಉತ್ತರ ನೀಡದಿದ್ದಲ್ಲಿ ಎಸ್‌ಐಟಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ. ಸಂತ್ರಸ್ತ ಯುವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲು ವಿಶೇಷ ತನಿಖಾ ತಂಡ ಮುಂದಾಗಿದೆ.

 

NEWS DESK

TIMES OF BENGALURU