ಬೆಂಗಳೂರು : ಬಿಬಿಎಂಪಿಯ ಕೌನ್ಸಿಲ್ ಹಾಲ್ ಮತ್ತು ಬಿಬಿಎಂಪಿಯ ಅನೆಕ್ಸ್ -3 ಕಟ್ಟಡದ ನೆಲ ಮಹಡಿಯಲ್ಲಿ ಹಳೆಯ ಅಂಬಾಸಿಟರ್ ಕಾರುಗಳು ಧೂಳು ತುಂಬಿಕೊಂಡಿವೆ. ಈ ದುರವಸ್ಥೆಯಲ್ಲಿರುವ ಸುಮಾರು 60 ಕಾರುಗಳನ್ನು ಬಿಬಿಎಂಪಿಯಿಂದ ವಿಲೇವಾರಿ ಮಾಡಲಾಗುತ್ತಿದೆ.
ಇದಕ್ಕಾಗಿ ಕಚೇರಿಯ ಅಧಿಕಾರಿಗಳು ಲಕ್ಷಗಳಟ್ಟಲೇ ಹಣ ಖರ್ಚು ಮಾಡುತ್ತಿದ್ದಾರೆ. ಈ ಕಾರುಗಳನ್ನು ಸರಿಪಡಿಸಿ ಅಧಿಕಾರಿಗಳು ಉಪಯೋಗಿಸುವುದರಿಂದ ಲಕ್ಷಾಂತರ ರೂಪಾಯಿಯನ್ನು ಉಳಿಸಬಹುದಾಗಿದೆ. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳು ನಿಷ್ಕ್ರಿಯ ವಾಹನಗಳನ್ನು ವಿಲೇವಾರಿ ಮಾಡುವತ್ತ ಗಮನ ಹರಿಸುತ್ತಿಲ್ಲ, ಅಲ್ಲದೇ ಯಾವುದೇ ಕ್ರಮವನ್ನು ಜರುಗಿಸಲು ಮುಂದಾಗಿಲ್ಲಲ್ಲಿ. ಇನ್ನೂಬಿಬಿಎಂಪಿ ತೆರಿಗೆ ಪಾವತಿದಾರರ ಹಣವನ್ನು ವಿವೇಕದಿಂದ ಬಳಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸಿದಂತೆ ಕಾಣುತ್ತಿದೆ. ಇನ್ನಾದರೂ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.
NEWS DESK
TIMES OF BENGALURU