ಉಚಿತ ಸಾವಯವ ಗೊಬ್ಬರ ವಿತರಣೆ

ಬೆಂಗಳೂರು : ಬಿಬಿಎಂಪಿಯ ಏಳು ಕಸ ಸಂಸ್ಕರಣಾ ಘಟಕಗಳಲ್ಲಿ ನಿತ್ಯವೂ ಹಸಿ-ಕಸವನ್ನು ವಿಂಡ್ ರೋ ವಿಧಾನದಲ್ಲಿ ಸಂಸ್ಕರಿಸಲಾಗುತ್ತದೆ. ಅದನ್ನು 35 ಮಿ.ಮೀ ಹಾಗೂ 16 ಮಿ.ಮೀ ಗಾತ್ರದ ರಂಧ್ರಗಳಿರುವ ಯಂತ್ರಗಳಲ್ಲಿ ಜರಡಿಯಾಡಲಾಗುತ್ತದೆ. ಉಪ ಉತ್ಪನ್ನವಾಗಿ ಲಭಿಸುವ ಎರಡನೇ ದರ್ಜೆಯ ಕಾಂಪೋಸ್ಟ್ ಅನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.

ರೈತರು ಈ ಉಪ ಉತ್ಪನ್ನವನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವಾಗಿ ಬಳಸಬಹುದು. ಇದರ ಬಳಕೆಯಿಂದ ನೆಲದ ಫಲವತ್ತತೆ ಹೆಚ್ಚಲಿದೆ’ ಎನ್ನುತ್ತಾರೆ ತಜ್ಞರು. ದೊಡ್ಡಬಿದಿರಕಲ್ಲಿನ ಕಸ ಸಂಸ್ಕರಣಾ ಘಟಕದಿಂದ ರೈತರು ಉಚಿತವಗಿ ಈ ಗೊಬ್ಬರವನ್ನು ಕೊಂಡೊಯ್ಯಬಹುದು ಎಂದು ದಾಸರಹಳ್ಳಿ ವಲಯದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

NEWS DESK

TIMES OF BEGALURU