ಸಿಡಿ ಕೇಸ್ : ಜಾಹೀರಾತು ಸಂಸ್ಥೆಗೆ ಎಸ್‍ಐಟಿ ನೋಟಿಸ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.  ಎಸ್‍ಐಟಿ ತಂಡ  ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಎಡಿಟ್ ಮಾಡಿರುವ ಜಾಹಿರಾತು ಸಂಸ್ಥೆ ಮಾಲೀಕರಿಗೆ ಎಸ್ ಐ ಟಿ ನೋಟೀಸ್ ನೀಡಿದೆ. ಸಂಸ್ಥೆಯ ಮಾಲೀಕ ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಿರುವ ಎಸ್ ಐ ಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಪ್ರಕರಣ ಸಂಬಂಧ ಎಸ್ ಐ ಟಿ ತಂಡ ರೇಲ್ವೆ ಪ್ಯಾರೆಲಲ್ ರಸ್ತೆಯ ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್, ಸಿಸ್ಟಮ್, ಪೆನ್ ಡ್ರೈವ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ನೋಟಿಸ್ ನೀಡಿದೆ.

 

NEWS DESK

TIMES OF BENGALURU