ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ರಕ್ಷಣೆ ಕೇಳಿದ ಆ ಯುವತಿಗಾದರೂ ರಕ್ಷಣೆ ಒದಗಿಸುವಿರಾ ಅಥವಾ ನಿಮ್ಮ ಮಹಿಳಾ ವಿರೋಧಿ ನಡೆ ಮುಂದುವರೆಸುವಿರಾ? ಎಂದು ಪ್ರಶ್ನಿಸಿದೆ.

ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಕಾಮಿಡಿ ಕಿಂಗ್ ಎಂದು ಟೀಕಿಸಿದ್ದು, ವಿಧಾನಸೌಧದ ಸನಿಹದಲ್ಲಿಯೇ ಒಬ್ಬ ಶಾಸಕರಿಗೇ ರಕ್ಷಣೆ ನೀಡಲಾಗದ್ದು ನಿಮ್ಮ ಸರ್ಕಾರದ ವೈಫಲ್ಯವಲ್ಲವೇ? ಎಂದು ಕಿಡಿಕಾರಿದೆ. ಉದ್ಯೋಗ ಕೇಳಿದ ಯುವತಿಯನ್ನು ದುರುಪಯೋಗಪಡಿಸಿಕೊಂಡ ನಿಮ್ಮಿಂದ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು. ರಕ್ಷಣೆ ಕೇಳಿದ ಆ ಯುವತಿಗಾದರೂ ರಕ್ಷಣೆ ಒದಗಿಸುವಿರಾ ಅಥವಾ ನಿಮ್ಮ ಮಹಿಳಾ ವಿರೋಧಿ ನಡೆ ಮುಂದುವರೆಸುವಿರಾ?

ಇದೇ ವೇಳೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧವೂ ಹರಿಹಾಯ್ದ ಕಾಂಗ್ರೆಸ್, ವಿಧಾನಸೌಧ ದಲ್ಲಾಳಿಗಳ ಶಾಪಿಂಗ್ ಮಾಲ್ ಹಾಗೂ ಸಿಎಂ ಗೃಹ ಕಚೇರಿ ವರ್ಗಾವಣೆ ದಂಧೆ, ಗುತ್ತಿಗೆ ಡೀಲಿಂಗ್, ಕಮಿಷನ್ ದಂಧೆಗಳ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ನ ಹೆಡ್ಡಾಫೀಸ್, ಬಿಜೆಪಿ ಕರ್ನಾಟಕ ಭ್ರಷ್ಟಾಚಾರವನ್ನೇ ಹಾಸಿ ಮಲಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

NEWS DESK

TIMES OF BENGALURU