ರಾಬರ್ಟ್ ಚಿತ್ರ ಬಿಡುಗಡೆಯಾದಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಲ್ಲಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡುತ್ತಿದೆ. ಇತ್ತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಥಿಯೇಟರ್ಗಳ ಭೇಟಿಗೆ ಮುಂದಾಗಿದ್ದಾರೆ. ವಾರಾಂತ್ಯದಲ್ಲಿ ಕೆಲ ಥಿಯೇಟರ್ಗಳಿಗೆ ಭೇಟಿ ನೀಡಿದ ದರ್ಶನ್, ಮಾರುವೇಷದಲ್ಲಿ ಅಭಿಮಾನಿಗಳ ನಡುವೆಯೇ ಕುಳಿತು ಚಿತ್ರವನ್ನು ವೀಕ್ಷಿಸಿದ್ದಾರೆ.
ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆಗಳನ್ನು ಕೇಳಿಕೊಂಡು ಖುಷಿಯಾಗಿರುವ ದರ್ಶನ್, ಮುಂದಿನ ಸಿನಿಮಾದಲ್ಲಿ ಶಿಳ್ಳೆ, ಚಪ್ಪಾಳೆ ಹೆಚ್ಚಾಗಿ ಬರುವ ದೃಶ್ಯಗಳ ಕಡೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಬಿಡುಗಡೆಗೂ ಮೊದಲೇ ದಾಖಲೆಯ ಪ್ರದರ್ಶನ ಕಾಣುವ ಮೂಲಕ ಸದ್ದು ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ, ಬಿಡುಗಡೆಯ ನಂತರ ಗಳಿಕೆಯ ಮೂಲಕ ಸದ್ದು ಮಾಡುತ್ತಿದೆ.
NEWS DESK
TIMES OF BENGALURU