ಶಾಸಕರನ್ನು ಬೀದಿ ಬೀದಿ ಅಲೆಸಬೇಡಿ: ಶಿವಲಿಂಗೇಗೌಡ

ಬೆಂಗಳೂರು: ಕೊರೊನಾದಿಂದ ಅನುದಾನ ತಡೆದು ಶಾಸಕರನ್ನು ಬೀದಿ ಬೀದಿ ಅಲೆಸಬೇಡಿ, ನಮಗೆ ಯಾವುದೇ ಹೊಸ ಅನುದಾನವೂ ಬೇಡ. ಕೊಡಬೇಕಾದ ಅನುದಾನ ಸರಿಯಾಗಿ ಕೊಟ್ಟರೆ ಸಾಕು ಎಂದು ಸರ್ಕಾರದ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲೂ ನಿಮ್ಮದೇ, ಇಲ್ಲೂ ನಿಮ್ಮದೇ ಸರ್ಕಾರ ಇದೆ.

ಬರಕ್ಕೂ ದುಡ್ಡಿಲ್ಲ, ಪ್ರವಾಹಕ್ಕೂ ದುಡ್ಡಿಲ್ಲ, ನಮ್ಮ ರಾಜ್ಯದ ಸಂಸದರು ಏನು ಮಾಡ್ತಿದ್ದಾರೆ.? ಕೇಂದ್ರದ ಜುಟ್ಟು ಹಿಡಿದು ಯಾಕೆ ಕೇಳ್ತಿಲ್ಲ? ನಮ್ಮಂತಹ ಬಡಪಾಯಿಗಳಿಗೆ ಅನ್ಯಾಯ ಮಾಡಬೇಡಿ. ನಮಗೆ ಹೊಸ ಬಜೆಟ್ ಹಣ ಬೇಡ, ನಮಗೆ ಹಳೆ ಬಜೆಟ್‌ನ ಅನುದಾನ ಕೊಡಿ ಸಾಕು. ಕೊರೊನಾವನ್ನು ಎಲ್ಲದಕ್ಕೂ ಅಡ್ಡಿ ಮಾಡುತ್ತಿದ್ದೀರಾ.. ನಿಮಗೆ ಮಾತ್ರ ಯಾವುದೇ ಕೊರೊನಾ ಅಡ್ಡಿ ಇಲ್ಲ. ನಮ್ಮಂತಹ ಬಡಪಾಯಿ ಶಾಸಕರಿಗೆ ಮಾತ್ರ ಕೊರೊನಾ ಅಡ್ಡ ತರ್ತೀರಾ ಎಂದು ಕಿಡಿಕಾರಿದರು. ಕೋವಿಡ್‌ಗೆ 5375 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಹಣ ಇಲಾಖೆಯಿಂದ ತೆಗೆದು ಖರ್ಚು ಮಾಡಲಾಗಿದೆ. ಇದರ ಬಗ್ಗೆ ನೀವು ಎಲ್ಲೂ ಯಾಕೆ ಸ್ಪಷ್ಟಪಡಿಸಿಲ್ಲ.? ಇಂದಿನ ಬಜೆಟ್‌ನ 2.33 ಲಕ್ಷ ಕೋಟಿ ಹಣ ಎಲ್ಲಿ ಹೋಯಿತು. ಸಂಪುಟದಲ್ಲಿಟ್ಟುಕೊಂಡು ಬೇಕಾದಂತೆ ಖರ್ಚು ಮಾಡಿದ್ದೀರಾ.. ಒಬ್ಬೊಬ್ಬರು 500,1000 ಕೋಟಿ ರೂ. ಪಡೆದುಕೊಂಡಿದ್ದೀರಾ, ನಮ್ಮಂತವರಿಗೆ ಮಾತ್ರ ಅನ್ಯಾಯ ಮಾಡಿದ್ದೀರಲ್ಲಾ ಏಕೆ.? ಎಂದು ಪ್ರಶ್ನೆ ಕೇಳುವುದರ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

 

NEWS DESK

TIMES OF BENGALURU