ರಾಜಧಾನಿಯಲ್ಲಿರುವ ವೆರೈಟಿ ಚಾಟ್ಸ್..

ಬೆಂಗಳೂರು ಸೇರಿದಂತೆ ಬಹುತೇಕ ಪ್ರದೇಶದ ಜನರು ಕೂಡಾ ಚಾಟ್ಸ್ ಪ್ರಿಯರೇ.. ಆಗಂತ ಬೆಂಗಳೂರಿನಲ್ಲಿ ತೆಲೆಯೆತ್ತಿರುವ ಚಾಟ್ಸ್ ಸೆಂಟರ್‍ಗಳ ಸಂಖ್ಯೆಯೇನು ಕಮ್ಮಿಯಿಲ್ಲ. ಡಿಫೆರೆಂಟ್ ವೆರೈಟಿ ಚಾಟ್ಸ್ ಸವಿಯಬೇಕು ಅನ್ನೋ ಆಸೆ ಯಾರಿಗೆ ತಾನೆ ಇಲ್ಲ ಹೇಳಿ. ಎಂತ ಡಯಟ್ ಮಾಡುತಿದ್ರು ಚಾಟ್ಸ್ ಸಿಹಿ , ಹುಳಿ, ಪುದಿನಾ, ಕೊತ್ತಂಬರಿ, ನಿಂಬೆರಸ ,ಕಪ್ಪು ಉಪ್ಪಿನ ಪರಿಮಳ ಮೂಗಿಗೆ ಬಡಿದಾಗ ಎಂಥವರ ಬಾಯಿಯಲ್ಲೂ ನೀರೂರತ್ತೆ.

ನಗರದಲ್ಲಿ ಹಲವಾರು ಚಾಟ್ಸ್ ಸೆಂಟರ್‍ಗಳಿವೆ ಆದ್ರೆ ಕೆಲವೂಂದು ದಶಕಗಳಿಂದ ವಿಶಿಷ್ಟ ಚಾಟ್ಸ್ಗಳಿಗೆ ಫುಲ್ ಫೇಮಸ್ ಆಗಿವೆ.  ಪಾನಿಪುರಿ, ಸೇವ್ ಪುರಿ, ಸಮೋಸಾ, ಗೋಬಿಮಂಜೂರಿ, ಮಸಾಲಪುರಿ, ಮಿರ್ಚಿ ಮಂಡಕ್ಕಿ , ಬಿಸಿ ಬಿಸಿ ಬೊಂಡಾ, ಬಜ್ಜಿ, ಮಂಗಳೂರು ಬನ್ಸ್, ವಡಾಪಾವ್, ಹೀಗೆ ಮುಂತಾದ ಚಾಟ್ಸಗಳು ಇಲ್ಲಿ ಹೆಸರುವಾಸಿಯಾಗಿವೆ. ಈ  ಚಾಟ್ಸ್ ಗಳ ಹೆಸರನ್ನು ಕೇಳುತ್ತಿದ್ದರೆ ಒಂದು ಕೈ ನೋಡಿ ಬಿಡೋಣ ಅನಿಸೋದಂತೂ ಗ್ಯಾರಂಟಿ.

NEWS DESK

TIMES OF BENGALURU