ಹುಟ್ಟು ಹಬ್ಬದ ಸಂಭ್ರಮದಲ್ಲಿ ಪವರ್ ಸ್ಟಾರ್

ಬೆಂಗಳೂರು: ಪ್ರತಿವರ್ಷ ಪುನೀತ್ ರಾಜಕುಮಾರ್ ಜನ್ಮದಿನವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ವರ್ಷದಿಂದ ಪುನೀತ್ ರಾಜಕುಮಾರ್  ರವರು ಕೊರೋನಾ ಕಾರಣದಿಂದ ಅದ್ಧೂರಿ ಜನ್ಮದಿನಕ್ಕೆ ಬ್ರೇಕ್ ಹಾಕಿದ್ದಾರೆ.

ತಮ್ಮ ಜನ್ಮದಿನಕ್ಕೂ ಎರಡು ದಿನಗಳ ಮುಂಚೆಯೇ ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ ಬಂದಿರುವ ಪುನೀತ್‌ ರಾಜಕುಮಾರ್‌, “ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ನನ್ನ ಜನ್ಮದಿನದಂದು ನಾನು ಮನೆಯಲ್ಲಿ ಇರುವುದಿಲ್ಲ. ಕುಟುಂಬ ದೊಂದಿಗೆ ದೇವಾಲಯಕ್ಕೆ ತೆರಳಲಿದ್ದೇನೆ.. ಹಾಗಾಗಿ ಯಾರೂ ಮನೆಗೆ ಬರುವುದು ಬೇಡ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಇನ್ನು ಪುನೀತ್‌ ರಾಜಕುಮಾರ್‌ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು, ಈ ಬಾರಿಯೂ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ. ಬರ್ತ್ ಡೇ ಪ್ರಯುಕ್ತ ವಿಶೇಷ ಸಿಡಿಪಿ ವಿನ್ಯಾಸಗೊಳಿಸಿರುವ ಅಪ್ಪು ಫ್ಯಾನ್ಸ್‌, ಅದನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಪವರ್‌ಸ್ಟಾರ್‌ಗೆ ಜನ್ಮದಿನದ ಶುಭಾಶಯ ಕೋರಲು ಮುಂದಾಗಿದ್ದಾರೆ.

NEWS DESK

TIMES OF BENGALURU