ಡ್ರಗ್ಸ್ ದಂಧೆ; ಇಬ್ಬರು ವಿದೇಶಿಯರು ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ನೈಜೀರಿಯದವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 65 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಓಜೋಚುಕ್ವು ಮಾರ್ಕ್ ಮೌರಿಸ್ ಎಂಬುವನು ಬಂಧಿತ. 56 ಎಲ್‍ಎಸ್‍ಡಿ ಪೇಪರ್, 100 ಗ್ರಾಂ ಬ್ರೌನ್ ಎಂಡಿಎಂಎ, 400 ಗ್ರಾಂ ಎಂಡಿಎಂಎ ಹಾಗೂ 91 ಎಕ್ಸಾಟೇಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಯ ವಿರುದ್ದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಈತ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲೆ ನೆಲೆಸಿ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಈತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರೆ.

 

NEWS DESK

TIMES OF BENGALURU