ನಾಡಗೀತೆಗೆ ಕತ್ತರಿ ; ನಾಡಿನ ಜನತೆಯಿಂದ ಆಕ್ರೋಶ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರು ರಚನೆ ಮಾಡಿರುವ ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆಯ ಅವಧಿಯನ್ನು 2 ನಿಮಿಷ 30 ಸೆಕೆಂಡುಗಳಿಗೆ ಅದರಲ್ಲೂ ವೃದ್ದರಿಗಾಗಿ ನಾಡಗೀತೆಯನ್ನು ಸೀಮಿತ ಮಾಡುವುದಕ್ಕೆ ಸಂಬಂಧಪಟ್ಟಂತೆ ರಾಜ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತೆಗೆದುಕೊಳ್ಳುತ್ತಿರುವ ನಿರ್ಧಾರಕ್ಕೆ ನಾಡಿನ ಜನತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತಿದ್ದಾರೆ.

ನಾಡಗೀತೆಗೆ ಕತ್ತರಿ ಪ್ರಯೋಗ ಮಾಡುವುದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿಯವರು ನಾಡಗೀತೆಗೆ ಸಂಬಂಧಪಟ್ಟಂತೆ ನಾಡಗೀತೆ ಬಹಳ ಉದ್ದವಾಗಿದ್ದು, ನಿಯಮದ ಪ್ರಕಾರ ನಾಡಗೀತೆಯನ್ನು ಹಾಡುವ ಸಮಯದಲ್ಲಿ ಎದ್ದು ನಿಂತು ಗೌರವವನ್ನು ಸಲ್ಲಿಸಬೇಕಾಗಿದೆ. ಆದರೆ ಕೆಲವು ಸಮಯದಲ್ಲಿ ವೃದ್ದರು ನಾಡ ಗೀತೆಗೆ ಗೌರವ ನೀಡುವ ಸಮಯದಲ್ಲಿ ಎದ್ದು ನಿಲ್ಲಬೇಕಾದ ಅನಿವಾರ್ಯತೆಯಾದ ವೇಳೆಯಲ್ಲಿ ಕುಸಿದು ಬಿದ್ದಿರುವ ಘಟನೆಗಳು ಕೂಡ ನಡೆದಿದೆ, ಹೀಗಾಗಿ ತಜ್ಞನರ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂಥ ಹೇಳಿದ್ದಾರೆ.

NEWS DESK

TIMES OF BENGALURU