ಏ.15ಕ್ಕೆ ಕೆಂಗೇರಿ ಮಾರ್ಗ ಪರೀಕ್ಷಾರ್ಥ ಸಂಚಾರ ?

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದಲ್ಲಿನ ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ (ರೀಚ್ 2) ಏಪ್ರಿಲ್ 15ರಿಂದ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಿದ್ಧತೆಯ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮಂಗಳವಾರ ಚಾಜಿರ್ಂಗ್ ವಾಹನದ ಪರೀಕ್ಷೆ ನಡೆಸಿದರು. ಈ ಮಾರ್ಗದಲ್ಲಿ ಹಳಿ ಜೋಡಿಸುವ ಕಾರ್ಯ ಫೆಬ್ರುವರಿಯಲ್ಲಿಯೇ ಮುಗಿದಿದೆ.

ಈ ಮಾರ್ಗದಲ್ಲಿ ಬರುವ ಆರು ನಿಲ್ದಾಣಗಳಲ್ಲಿ ಏಪ್ರಿಲ್ ಮಧ್ಯಭಾಗದಿಂದ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ಮೇ ತಿಂಗಳಲ್ಲಿ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಗೆ (ಸಿಎಂಆರ್‍ಎಸ್) ವಾಣಿಜ್ಯ ಸಂಚಾರಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗುವುದು. ಜೂನ್ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದೆ’ ಎಂದು ಅಜಯ್ ಸೇಠ್ ಹೇಳಿದರು.

NEWS DESK

TIMES OF BENGALURU