ಜಗ್ಗೇಶ್ ಬರ್ತ್‍ಡೇಗೆ ತೋತಾಪುರಿ ಪೋಸ್ಟ್‍ರ್ ಗಿಫ್ಟ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಇಂದು ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಎರಡನೇ ಆತಂಕ  ಹೆಚ್ಚಾಗಿರುವುದರಿಂದ ಜಗ್ಗೇಶ್ ಈ ಬಾರಿ ಸರಳವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಜಗ್ಗೇಶ್ ಬರ್ತ್‍ಡೇ ಪ್ರಯುಕ್ತ ‘ತೋತಾಪುರಿ’ ಚಿತ್ರತಂಡ ಚಿತ್ರದ ಪೋಸ್ಟ್‍ರ್ ಬಿಡುಗಡೆ ಮಾಡಿದೆ. ಸುರೇಶ್ ಆಟ್ರ್ಸ್ ಪ್ರೀ ರಿಲೀಸ್ ಬ್ಯಾನರ್‍ನಲ್ಲಿ ಕೆ.ಎ ಸುರೇಶ್ ನಿರ್ಮಿಸುತ್ತಿರುವ “ತೋತಾಪುರಿ’ ಚಿತ್ರಕ್ಕೆ ವಿಜಯ್ ಪ್ರಸಾದ್ ಕಥೆ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ನಿರಂಜನ್ ಬಾಬು ಛಾಯಾ ಗ್ರಹಣ, ಸುರೇಶ್ ಅರಸ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆ.ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಜಗ್ಗೇಶ್ ಅವರೊಂದಿಗೆ ನಟ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಏಪ್ರಿಲ್-ಮೇ ವೇಳೆಗೆ  ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿ ಇದ್ದಾರೆ.

 

NEWS DESK

TIMES OF BENGALURU