ಬೆಂಗಳೂರಿನಲ್ಲಿ ಕೊರೊನಾ ಆರ್ಭಟ

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಬೆಂಗಳೂರಿನ ಹಲವು ವಾರ್ಡ್‍ಗಳಲ್ಲಿ ಕೊರೊನಾ ಸಂಖ್ಯೆ ಅಧಿಕವಾಗುತ್ತಿದೆ. 6 ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದು, ಭಾರಿ ಎಚ್ಚರಿಕೆಯಿಂದ ಇರಲು ಬಿಬಿಎಂಪಿ ಸೂಚಿಸಿದೆ. ಕಳೆದ ಹತ್ತು ದಿನದಲ್ಲಿ ಯಾವ ಯಾವ ಏರಿಯಾದಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂಬುದರ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ವರ್ಚ್ಯುಯಲ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಹತ್ತು ವಾರ್ಡ್ಗಳಲ್ಲಿ ಕಳೆದ ಹತ್ತು ದಿನದಿಂದ ಕೊರೊನಾ ಸೋಂಕು ಏರಿಕೆಯಾಗುತ್ತಿದೆ.

ಮಹದೇವಪುರದ ಬೆಳ್ಳಂದೂರು, ಹಗದೂರು. ಬೆಂಗಳೂರಿನ ದಕ್ಷಿಣ ಬಿಟಿಎಂ ಲೇಔಟ್, ಹೊಸಕೆರೆ ಹಳ್ಳಿ. ಬೊಮ್ಮನಹಳ್ಳಿಯ ಕೋಣನಕುಂಟೆ, ಜರಗನಹಳ್ಳಿ. ಪೂರ್ವ ವಲಯ ಶಾಂತಲನಗರ, ಬಾಣಸವಾಡ. ಪಶ್ಚಿಮ ವಲಯ ಗಾಂಧಿನಗರ. ಆರ್.ಆರ್ ನಗರ ಜ್ಞಾನಭಾರತಿ. ಈ ಪ್ರದೇಶದಲ್ಲಿರುವವರು ಎಚ್ಚರದಿಂದಿರಬೇಕು, ಕೊರೊನಾ ಮಾರ್ಗಸೂಚಿ ತಪ್ಪದೇ ಪಾಲಿಸಬೇಕು ಎಂದು ಬಿಬಿಎಂಪಿ ಕೋರಿದೆ.

NEWS DESK
TIMES OF BENGALURU