ಬೆಂಗಳೂರು: ಸ್ನೇಹಿತನ ಹೊಸ ಬೈಕ್ ಸವಾರಿ ಮಾಡುತ್ತಿದ್ದ ಯುವಕ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ನಗರದ ಆರ್ಆರ್ಎಂಆರ್ ರಸ್ತೆಯಲ್ಲಿ ನಡೆದಿದೆ.
ಹರ್ಷ(24) ಮೃತಪಟ್ಟ ಯುವಕ. ಈತ ಎಸ್.ಆರ್. ನಗರ ನಿವಾಸಿ. ಪಾರ್ಟಿ ಮುಗಿಸಿಕೊಂಡು ಸ್ನೇಹಿತನ ಹೊಸ ರಾಯಲ್ ಎನ್ಫಿಲ್ಡ್ ಬೈಕ್ನಲ್ಲಿ ಮನೆಗೆ ತೆರಳ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ಫುಟ್ಪಾತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ಗುದ್ದಿದ ರಭಸಕ್ಕೆ ತಲೆಗೆ ಜೋರಾಗಿ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಕೋರಮಂಗಲದಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ಮನೆಗೆ ತೆರಳುತ್ತಿದ್ದಾಗ ಅವಗಢ ಸಂಭವಿಸಿದೆ. ಘಟನಾ ಸ್ಥಳ ಬಂದ ವಿಲ್ಸನ್ ಗಾರ್ಡನ್ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
NEWS DESK
TIMES OF BENGALURU